ತುಟ್ಟಿ ಭತ್ಯೆ ಹೆಚ್ಚಳಕ್ಕೆ ಜಿಲ್ಲಾ ಸರ್ಕಾರಿ ನೌಕರರ ಸಂಘ ಹರ್ಷ
ಕೋಲಾರ: ರಾಜ್ಯ ಸರ್ಕಾರಿ ನೌಕರರಿಗೆ ಶೇ.6 ರಷ್ಟು ತುಟ್ಟಿ ಭತ್ಯೆ ಏರಿಸಿರುವ ರಾಜ್ಯ ಸರ್ಕಾರ ಜುಲೈ 1 ರಿಂದಲೇ ಇದನ್ನು ಜಾರಿಗೆ ತಂದಿರುವುದನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್. ಮಂಜುನಾಥ್ ಸ್ವಾಗತಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಏರಿಸಿದ್ದು, ಜತೆಯಲ್ಲೇ ಗ್ರಾಮೀಣ ಪ್ರದೇಶದ ನೌಕರರಿಗೆ ಈ ಮಾಹೆಯಿಂದಲೇ ಮನೆ ಬಾಡಿಗೆ ಭತ್ಯೆಯನ್ನು ಶೇ.3 ಏರಿಸಿ, ಶೇ.10ಕ್ಕೆ ನಿಗದಿಗೊಳಿಸಿದ್ದು, ಅಕ್ಟೋಬರ್ ತಿಂಗಳಿಂದ ಶೇ.9 ರಷ್ಟು ಹೆಚ್ಚುವರಿ ವೇತನ ಭತ್ಯೆ ಪಡೆಯಲಿದ್ದಾರೆ ಎಂದು ತಿಳಿಸಿರುವ ಅವರು, ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಜಿಲ್ಲಾ ನೌಕರರ ಸಂಘದ ಗೌರವಾಧ್ಯಕ್ಷ ರವಿಚಂದ್ರ, ಪ್ರಧಾನ ಕಾರ್ಯದರ್ಶಿ ಅಶೋಕ್ ಪದಾಧಿಕಾರಿಗಳಾದ ರಂಗಯ್ಯ, ರಂಗಪ್ಪ ಮತ್ತಿತರರು ಸಹ ಸರ್ಕಾರಕ್ಕೆ ಕೃತಜ್ಞತೆ ತಿಳಿಸಿದ್ದಾರೆ.