ದನಗಳಿಗೆ ಕಾಲುಬಾಯಿ ಜ್ವರ: ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಚಿಂತಾಮಣಿ: ಕಾಲುಬಾಯಿ ಜ್ವರದಿಂದ ನೂರಾರು ರಾಸುಗಳು ಸಾವನ್ನಪ್ಪಿರುವುದರಿಂದ ರೈತರು ದಿವಾಳರಾಗುವ ಪರಿಸ್ಥಿತಿ ಉದ್ಭವವಾಗಿದ್ದರೂ ಪಶು ಸಂಗೋಪನಾ ಅಧಿಕಾರಿಗಳು ನಿದ್ರಾ ವ್ಯವಸ್ಥೆಯಲ್ಲಿರುವುದಾಗಿ ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಜೋಡಿ ರಸ್ತೆಯಪಶು ಸಂಗೋಪನಾ ಇಲಾಖೆ ಕಚೇರಿ ಮುಂಭಾಗದಲ್ಲಿ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಅಧಿಕಾರಿಗಳ ದೋರಣೆ ಖಂಡಿಸಿದರು. ಅಧಿಕಾರಿಗಳು ಗ್ರಾಮಗಳಲ್ಲಿ ಸರ್ವೇ ನಡೆಸಿ ರೈತರಿಗೆ ಪರಿಹಾರ ಕೊಟ್ಟು ರೈತರ ಪ್ರಾಣ ಉಳಿಸಬೇಕೆಂದು ಆಗ್ರಹಿಸಿ ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ. ಮಧುಸೂದನ್ಡ್ಡಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಜಿ.ವಿ. ರಘುನಾಥರೆಡ್ಡಿ, ಕಾರ್ಯಾಧ್ಯಕ್ಷ ಗಂಗುಲಪ್ಪ, ಎಂ.ಪಿ. ರಾಮರೆಡ್ಡಿ, ರೆಡ್ಡೆಪ್ಪ, ಗೋಪಾಲ, ಗೌಸ್ ಪೀರ್, ರಾಮಚಂದ್ರ, ವೆಂಕಟರವಣಪ್ಪ, ವೆಂಕಟೇಶ್, ಕೃಷ್ಣ, ರಮೇಶ್ ಇದ್ದರು.