ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಂಗನಾಚ್ ಪ್ರಕರಣ ಖಂಡಿಸಿ ಪ್ರತಿಭಟನೆ

Rashmi Kasaragodu
Updated On : 5 Oct 2013, 12:37 pm

ಕೋಲಾರ: ಬೀದರ್ನಲ್ಲಿ ನಡೆದಿರುವ ನಂಗನಾಚ್ ಪ್ರಕರಣ ಖಂಡಿಸಿ ನಗರದಲ್ಲಿ ಪ್ರಗತಿಪರ ಸಂಘಟನೆಗಳಿಂದ ಶುಕ್ರವಾರ ಸಂಜೆ ನಗರದ ಸರ್ಕಾರಿ ಬಸ್ಸು ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ನಾಗರಿಕ ಸಮಾಜ ತಲೆ ತಗ್ಗಿಸುವಂತಹ ನಂಗನಾಚ್ ಪ್ರಕರಣದಲ್ಲಿ ಬೀದರ್ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಬಾಬು ವಾಲಿ ಸೇರಿದಂತೆ ಇತರರು ಭಾಗಿಯಾಗಿದ್ದು, ಕೂಡಲೇ ಇವರ ವಿರುದ್ಧ ಪ್ರಕರಣ ದಾಖಲು ಮಾಡಬೇಕೆಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರನ್ನು ಆಗ್ರಹಿಸಿದರು.
ಮಹಿಳೆಯರ ಬಗ್ಗೆ ನೀತಿ ಪಾಠ ಹೇಳುವ ಬಿಜೆಪಿ ಮುಖಂಡರು ಮಾತಿನಲ್ಲಿ ಒಂದು ಕೃತಿಯಲ್ಲಿ ಮತ್ತೊಂದನ್ನು ಆಚರಿಸುವ ಮೂಲಕ ತಮ್ಮ ಬಣ್ಣ ಬಯಲು ಮಾಡಿದ್ದಾರೆ, ಹಿಂದೆ ಕೆಲವು ಸಚಿವರು ವಿಧಾನಸೌಧದಲ್ಲೇ ಆಶ್ಲೀಲ ಚಿತ್ರ ನೋಡಿ ಸಚಿವ ಸ್ಥಾನ ಕಳೆದುಕೊಂಡಿದ್ದರು. ಮತ್ತೊಬ್ಬ ಸಚಿವ ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರವೆಸಗಿದ್ದರು. ಬಿಜೆಪಿಯಲ್ಲಿ ಈ ರೀತಿಯ ಕೆಟ್ಟ ವ್ಯಕ್ತಿಗಳು ಇರುವುದರಿಂದಲೇ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರೂ ಮುಖಂಡರಿಗೆ ಬುದ್ದಿ ಬಂದಿಲ್ಲವೆಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ.ಗೀತಾ ಟೀಕಿಸಿದರು.
ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ತಪ್ಪಿತಸ್ಥರನ್ನು ಬಂಧಿಸಿ, ಸಮಗ್ರವಾಗಿ ವಿಚಾರಣೆ ನಡೆಸಬೇಕೆಂದು ಅವರು ಒತ್ತಾಯಿಸಿದರು.
ಜನವಾದಿ ಮಹಿಳಾ ಸಂಘಟನೆಯ ತಾಲೂಕು ಅಧ್ಯಕ್ಷೆ ಆಂಜನಮ್ಮ, ಸುಶೀಲ, ಖಜಾಂಚಿ ಶಾಂತಮ್ಮ, ಎಸ್.ಎಫ್.ಐ ಜಿಲ್ಲಾಧ್ಯಕ್ಷ ವಾಸುದೇವರೆಡ್ಡಿ, ಡಿವೈಎಫ್ಐ ತಾಲೂಕು ಅಧ್ಯಕ್ಷ ರಮೇಶ್, ಮುನಿರಾಜಮ್ಮ, ನಾರಾಯಣರೆಡ್ಡಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement