ನಾಳೆ ರಾಜಗೋಪುರ ಉದ್ಘಾಟನೆ
ಮುಳಬಾಗಲು: ಪಟ್ಟಣದ ಕುಂಬಾರಪಾಳ್ಯದ ಸೂರ್ಯನಾರಾಯಣಸ್ವಾಮಿ ದೇವಾಲಯದ ನೂತನ ರಾಜಗೋಪುರವನ್ನು ಅ.6 ರಂದು ತಂಬಿಹಳ್ಳಿ ಮಠದ ವಿದ್ಯಾಸಾಗರ ಮಾಧವ ತೀರ್ಥ ಸ್ವಾಮಿ ಉದ್ಫಾಟಿಸುವರು ಎಂದು ಶುಕ್ಲಯಜುವೇರ್ಧ ಮಹಾ ಸಭೆಯ ಕಾರ್ಯದರ್ಶಿ ಎಂ. ಗೋಪಾಲ್ ತಿಳಿಸಿದ್ದಾರೆ.
ಶಾಸಕ ಕೊತ್ತೂರು ಜಿ. ಮಂಜುನಾಧ್ ಮತ್ತು ಕಲ್ಲುಪಲ್ಲಿ ಪ್ರಕಾಶ್ ಭಾಗವಹಿಸುವರು. ಭಾನುವಾರ ಮೂಲದೇವರಿಗೆ ಪಂಚಾಮೃತಾಭಿಷೇಕ, ಕಳಶಾನುಷ್ಠಾನ, ಗಣಪತಿಹೋಮ, ನವಗ್ರಹ ಹೋಮ, ಸೌರಹೋಮ, ಆದಿತ್ಯಹೋಮ, ಮಹಾಪೂರ್ಣಹುತಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಶಾಲೆಗಳಿಗೆ ಮೂಲ
ಸೌಕರ್ಯ ಕಲ್ಪಿಸಲು ಕರೆ
ಮುಳಬಾಗಲು: ಕೋಲಾರ ಜಿಪಂ ಉಪಾಧ್ಯಕ್ಷೆ ಅಲುಮೇಲಮ್ಮ ರಾಜಗೋಪಾಲ್ ತಾಲೂಕಿನ ಚೊಕ್ಕದೊಡ್ಡಿ, ಕಾಡುಕಚ್ಚನಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚೊಕ್ಕದೊಡ್ಡಿ ಗ್ರಾಮದ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳು ಇಲ್ಲದ ಕುರಿತು ಅಸಂತೃಪ್ತಿ ವೃಕ್ತಪಡಿಸಿದರು. ಮಲ್ಲನಾಯಕನಹಳ್ಳಿ ಗ್ರಾಮದ ಕಸ್ತೂರಿ ಬಾ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿ, ಬಾಲಕಿಯರೊಂದಿಗೆ ಊಟ ಸೇವಿಸಿ ಶಾಲೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು ಕೊಳವೆ ಬಾವಿಯನ್ನು ಈ ಕ್ಷೇತ್ರದ ಜಿಪಂ ಸದಸ್ಯ ಕೆ.ಆರ್. ಕಿಟ್ಟಪ್ಪನವರೊಂದಿಗೆ ಸಂಪರ್ಕಿಸಿ ಕೊರೆಯಿಸುವುದಾಗಿ ಹೇಳಿದರು. ಮಲ್ಲನಾಯಕನಹಳ್ಳಿ ಗ್ರಾಪಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಪಂ ಸದಸ್ಯ ಎಂ.ಎಸ್.ಶ್ರೀನಿವಾಸರೆಡ್ಡಿ, ಕ್ಷೇತ್ರಶಿಕ್ಷಣಾಧಿಕಾರಿ ದೇವರಾಜ್ ಇದ್ದರು.