ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಿವೃತ್ತ ಸರ್ಕಾರಿ ನೌಕರರ ಸಂಘದಲ್ಲಿ ಇಂದು ಸಂಕೀರ್ತನೆ

Rashmi Kasaragodu
Updated On : 5 Oct 2013, 12:36 pm

ಕೋಲಾರ: ಜಿಲ್ಲಾ ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯನ್ನು ಅ.5 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದೆ. ಬಾಲಕೃಷ್ಣ ಭಾಗವತ್ತರ್ ಅವರಿಂದ ಸಂಕೀರ್ತನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಜಿಲ್ಲೆಯ ಎಲ್ಲಾ ನಿವೃತ್ತ ನೌಕರರು ಭಾಗವಹಿಸುವಂತೆ ಪ್ರದಾನ ಕಾರ್ಯದರ್ಶಿ ಜಿ.ಎ. ಜಯರಾಮರೆಡ್ಡಿ ತಿಳಿಸಿದ್ದಾರೆ.
ಎನ್ಸಿಸಿ ಕಾರ್ಯಕ್ರಮ ಉದ್ಘಾಟನೆ
ಕೋಲಾರ: ಸರ್ಕಾರಿ ಮಹಿಳಾ ಕಾಲೇಜಿನ 2013-14ನೇ ಸಾಲಿನ ಎನ್.ಸಿ.ಸಿ, ಎನ್.ಎಸ್.ಎಸ್ ಮತ್ತು ಸ್ಕೌಟ್ಸ್ ಮ್ಮತ್ತು ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಅ. 5 ರಂದು ಶನಿವಾರ ಬೆಳಗ್ಗೆ 11.30ಕ್ಕೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಿ.ಕೆ. ರವಿಯವರು ಕಾರ್ಯಕ್ರಮವನ್ನು ಉದ್ಘಾಟಿಸುವರು, ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್.ವಿ. ನಂದವಾಡಗಿ ಅಧ್ಯಕ್ಷತೆ ವಹಿಸಲಿದ್ದು. ಆಯುರ್ವೇದ ತಜ್ಞೆ  ಹಾಗೂ ಬರಹಗಾರ್ತಿ ಡಾ. ವಸುಂಧರ ಭೂಪತಿ ವಿಶೇಷ ಅತಿಥಿಯಾಗಿದ್ದಾರೆ.
ಎನ್ಎಸ್ಸೆಸ್ ಶಿಬಿರ
ಗೌರಿಬಿದನೂರು: ಹೋಬಳಿ ಕೇಂದ್ರವಾದ ಮಂಚೇನಹಳ್ಳಿಯ ಸಂಯುಕ್ತ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಜರಬಂಡಹಳ್ಳಿ ಗ್ರಾಪಂ ಮೈಲಗಾನಹಳ್ಳಿ ಗ್ರಾಮದಲ್ಲಿ ವಿಶೇಷ ಶಿಬಿರವನ್ನು ಸಹಾಯಕ ಅರಣ್ಯ ಸಂರಕ್ಷಣ ಅಧಿಕಾರಿ ಎಮ್.ಎನ್. ಕಿರಣ್ಕುಮಾರ್, ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಪ್ರಾಂಶುಪಾಲ ಎಸ್. ನಂಜುಂಡ ಉದ್ಘಾಟನೆ ಮಾಡಿದರು. ಅರಣ್ಯ ನಾಶದಿಂದ ಪರಿಸರ ನಾಶವಾಗುತ್ತಿದೆ ಎಂದರು. ಪ್ರಾಂಶುಪಾಲ ಎಸ್. ನಂಜುಂಡ, ಗ್ರಾಮದಲ್ಲಿ ಶಿಬಿರ ನಡೆಸಲು ಸಹಕರಿಸಿದ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು. 55 ವಿದ್ಯಾರ್ಥಿಗಳು  ಶ್ರಮದಾನ ಮಾಡಿದರು. ಉಪ ತಹಸೀಲ್ದಾದರ್ ರಘುಪತಿ, ಗ್ರಾಪಂ ಅಧ್ಯಕ್ಷೆ ಗಂಗಮ್ಮ ಎಮ್.ಎನ್. ಗುರುಶಂಕರಯ್ಯ, ಎಚ್.ಎನ್. ಶಿವಕುಮಾರ್, ಸುಬ್ಬಲಕ್ಷ್ಮೀ, ಎ.ಆರ್. ಲತ, ಎಸ್. ವೆಂಕಟೇಶ್ ಮೂರ್ತಿ ಇದ್ದರು.
ಪದಾಧಿಕಾರಿಗಳ ಆಯ್ಕೆ
ಬಾಗೇಪಲ್ಲಿ: ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿ ಪದಾಧಿಕಾರಿಗಳನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ವೈ.ಆರ್. ಶ್ರೀನಿವಾಸ್, ಉಪಾಧ್ಯಕ್ಷರಾಗಿ ಎಂ. ಶೀನಿವಾಸ್, ಕಾರ್ಯದರ್ಶಿಯಾಗಿ ಬಾಲಕೃಷ್ಣ, ಜಂಟಿ ಕಾರ್ಯದರ್ಶಿಯಾಗಿ ವಿ. ರಘುಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಆರ್. ಅಮರಪ್ಪ, ಖಜಾಂಚಿಯಾಗಿ ಸಿ. ವೆಂಕಟೇಶ್, ಹೋಬಳಿ ಸಮಿತಿ ಸದಸ್ಯರಾಗಿ ಸೈಯದ್ ನೂರುಲ್ಲಾ, ನಾರಾಯಣಸ್ವಾಮಿ, ಶಿವಪ್ಪನಾಯ್ಕ ಆಯ್ಕೆಯಾಗಿದ್ದಾರೆಂದು ಸಂಘದ ಕಾರ್ಯದರ್ಶಿ ಬಾಲಕೃಷ್ಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement