ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪರಿಚಯಸ್ಥ ವ್ಯಕ್ತಿಯಿಂದಲೇ ಮಗು ಅಪಹರಣ

Rashmi Kasaragodu
Updated On : 5 Oct 2013, 12:34 pm

ಕನ್ನಡಪ್ರಭ ವಾರ್ತೆ, ಮಾಲೂರು. ಆ.4
ಮನೆ ಮುಂದೆ ಆಟವಾಡುತ್ತಿದ್ದ ಹತ್ತು ತಿಂಗಳ ಮಗುವೊಂದನ್ನು ಅದೇ ಗ್ರಾಮದ ಯುವಕನೊಬ್ಬ ಅಪಹರಿಸಿ ಪರಾರಿಯಾಗಿರುವ ಘಟನೆ ತಾಲೂಕಿನ ಅಹನ್ಯ ಗ್ರಾಮದಲ್ಲಿ ಗುರುವಾರ ನಡೆದಿದೆ.
 ಈ ಸಂಬಂಧ ಗ್ರಾಮದ ಮಗುವಿನ ತಂದೆ ಶ್ರೀಧರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದರಂತೆ ಗುರುವಾರ ಮಧ್ಯಾಹ್ನ ಮನೆ ಮುಂದೆ ತನ್ನ ತಾಯಿಯ ಜತೆಯಲ್ಲಿ ಆಟವಾಡುತ್ತಿದ್ದ ಇನ್ನೂ ಹೆಸರಿಡದ ಮಗುವನ್ನು ಗ್ರಾಮದ ಪರಿಚಯಸ್ಥ ಯುವಕ ಚಂದ್ರಶೇಖರ್ ತನ್ನ ಮನೆಯಲ್ಲಿ ಆಟವಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಮಗುವನ್ನು ತೆಗೆದುಕೊಂಡು ಹೋಗಿದ್ದ. ಬಹಳ ಸಮಯದವರೆಗೆ ವಾಪಸಾಗದ ಹಿನ್ನೆಲೆಯಲ್ಲಿ ಅತನ ಮನೆಯ ಬಳಿ ಹೋಗಿದಾಗ ಚಂದ್ರಶೇಖರ್ನ ಮನೆ ಬೀಗ ಹಾಕಿತ್ತು. ಅದಲ್ಲದೇ ಗ್ರಾಮದಲ್ಲಿ ಹಾಗೂ ಸುತ್ತ ಮುತ್ತಲ ಗ್ರಾಮಗಳಲ್ಲಿ ಹುಡಕಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಹತ್ತು ತಿಂಗಳ ಗಂಡು ಮಗುವಿನೊಂದಿಗೆ ಪರಾರಿಯಾಗಿರುವ ಚಂದ್ರಶೇಖರ್ನನ್ನು ಬಂಧಿಸಿ ಮಗುವನ್ನು ಪತ್ತೆ ಮಾಡಿಸಿಕೊಡಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಮೊ.ಸಂಖ್ಯೆ 308-2013 ಕಲಂ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಮಗು ಹಾಗೂ ಆರೋಪಿ ಚಂದ್ರಶೇಖರ್ ಫೋಟೋ ಬಿಡುಗಡೆ ಮಾಡಿರುವ ಪೊಲೀಸರು ಆರೋಪಿ ಪತ್ತೆಯಾದರೆ ಸ್ಥಳೀಯ ಪೊಲೀಸ್ ಠಾಣೆಗೆ(ಮೊ.ನಂ.9480802632 ಅಥವಾ 08151-232220)ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement