ಮಹಾಲಯ ಅಮಾವಾಸ್ಯೆ ಆಚರಣೆ
ಶಿಡ್ಲಘಟ್ಟ: ಮಹಾಲಯ ಅಮಾವಾಸ್ಯೆಯನ್ನು ತಾಲೂಕಿನಾದ್ಯಂತ ಭಕ್ತಿಭಾವಗಳಿಂದ ಆಚರಣೆ ಮಾಡಿದರು. ಪಿತೃಪಕ್ಷಗಳ ಮುಕ್ತಾಯದ ದಿನವಾದ ಇಂದು ಪಿತೃಗಳ ಆತ್ಮಕ್ಕೆ ಶಾಂತಿ ಸಿಗುವಂತೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಅವರ ಆಶೀರ್ವಾದದಿಂದ ನಾವು ಸ್ವರ್ಗಕ್ಕೆ ಹೋಗುತ್ತೇವೆ ಎಂಬ ನಂಬಿಕೆ ಇದೆ. ಕೆಲವರು ಪಿತೃಗಳಿಗೆ ಪಿಂಡ ದಾನಮಾಡಿದರು.
ಪೊಲೀಸ್ ಕಚೇರಿಯಲ್ಲಿ ಗಾಂಧಿ ಜಯಂತಿ
ಕೆಜಿಎಫ್: ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಹಾತ್ಮಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿಕಟೋಚ್ ಸಫೆಟ್ ಅವರು ಮಹಾತ್ಮಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ ಅವರ ಕೊಡುಗೆಯನ್ನು ಸ್ಮರಿಸಿದರು.
ಈ ವೇಳೆ ಉಪರಕ್ಷಣಾಧಿಕಾರಿ ವಿವೇಕಾನಂದ, ಇನ್ಸ್ಪೆಕ್ಟರ್ ಜಿ.ಟಿ. ಸ್ವಾಮಿ, ಪಿಎಸ್ಐ ಸುರೇಶ್, ಆಡಳಿತಾಧಿಕಾರಿ ವಿಶ್ವನಾಥ್, ನೀಲಮೇಗಂ, ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.