ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೈತರ ಗಮನ ಸೆಳೆದ ಕೃಷಿ ವಸ್ತು ಪ್ರದರ್ಶನ

Rashmi Kasaragodu
Updated On : 5 Oct 2013, 12:37 pm

ಚೌಡದೇನಹಳ್ಳಿಯಲ್ಲಿ ಬೆಂಗಳೂರಿನ ಜಿಕೆವಿಕೆ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಆಯೋಜನೆ

ಕೋಲಾರ: ತಾಲೂಕಿನ ಚೌಡದೇನಹಳ್ಳಿಯಲ್ಲಿ ಬೆಂಗಳೂರಿನ ಜಿಕೆವಿಕೆ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಕೃಷಿ ವಸ್ತು ಪ್ರದರ್ಶನ ರೈತರ ಗಮನ ಸೆಳೆಯಿತು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಕಂಪನಿ, ನರಸಾಪುರ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಮತ್ತು ಚೌಡದೇನಹಳಿ ಗ್ರಾಮ ಪಂಚಾಯಿತಿ ಹಾಗೂ ಹಾಲು ಉತ್ಪಾದಕ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಅಂತಿಮ ವರ್ಷದ ಬಿ ಎಸ್ಸಿ(ಕೃಷಿ), ಕೃಷಿ ಮಾರಾಟ ಮತ್ತು ಸಹಕಾರ (ಬಿ.ಎಸ್ಸಿ) ಹಾಗೂ ಕೃಷಿ ಇಂಜಿನಿಯರಿಂಗ್ ಬಿ.ಟೆಕ್ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಅನುಭವದ 80  ದಿನಗಳ ಕಾರ್ಯಕ್ರಮದ ಅಂಗವಾಗಿ ಈ ಕೃಷಿ ವಸ್ತು ಪ್ರದರ್ಶನವನ್ನು  ಆಯೋಜಿಸಲಾಗಿತ್ತು.
ಗ್ರಾಮದ ಮುಖಂಡ ಸಿ.ಬಿ. ನಾಗಾರ್ಜುನ್, ಹಿರಿಯ ಮುಖಂಡ ಸೊಣ್ಣೇಗೌಡ, ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಸಿ.ಎನ್. ಶ್ರೀನಿವಾಸ್, ಬೆಂಗಳೂರು ಕೃಷಿ  ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ವಿಭಾಗ ಪ್ರಾಧ್ಯಾಪಕಿ ಡಾ.ನೀನಾ ಜ್ಯೋಷಿ, ಕೃಷಿ ವಿಸ್ತರಣಾ ವಿಭಾಗ ಪ್ರಾಧ್ಯಾಪಕ ಡಾ. ಬಿ. ಕೃಷ್ಣಮೂರ್ತಿ, ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ರೈತರಿಗೆ ಉಪಯುಕ್ತವಾದ ಕೃಷಿ ವಸ್ತು ಪ್ರದರ್ಶನ ವಿವಿಧ ಬೆಳೆಗಳನ್ನು ಹೇಗೆ ಬೆಳೆಯಬೇಕು, ಪೋಷಿಸಬೇಕೆಂಬ ಅರಿವು ಪಡೆಯಲು ಅನುಕೂಲವಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧಕ್ಷೆ ಅಂಜನಮ್ಮ, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಸಿ. ಮಂಜುನಾಥ್,ಪ್ರಗತಿಪರ ರೈತರಾದ ಸಿ. ಬೈರಪ್ಪ, ಚನ್ನರಾಯಗೌಡ, ಶಾಮಣ್ಣ, ಟಿ ನಾರಾಯಣ ಸ್ವಾಮಿ, ರೈತ ಮಹಿಳೆಯರಾದ ವನಿತ, ಮಂಜುಳ, ನರಸಾಪುರ ರೈತ ಸಂಪರ್ಕ ಕೇಂದ್ರ  ಕೃಷಿ ಅಧಿಕಾರಿ  ಕೆ. ಮಂಜುನಾಥ್, ಬೀಜ ತಂತ್ರಜ್ಞಾನ ವಿಭಾಗ ಸಂಶೋಧಕ  ಗಿರೀಶ್, ಜೇನು ಸಾಕಾಣಿಕೆ ವಿಭಾಗ ಸಹಾಯಕ ಪ್ರಾಧ್ಯಾಪಕಿ ಡಾ. ಬಿ.ವಿ. ಶ್ವೇತ ಮತ್ತಿತರರು ಇದ್ದರು. ಶಿಬಿರದ ವಿದ್ಯಾರ್ಥಿಗಳಾದ ಶೇಕ್ ಸಲ್ಮಾನ್ ವರದಿ ವಾಚಿಸಿ, ಸಚಿನ್ ನಿರೂಪಿಸಿ, ಎ.ಡಿ ಸೀಮಾ ಸ್ವಾಗತಿಸಿ,  ರುಹೀಲ್ ವಂದಿಸಿದರು.
ಈ ಕೃಷಿ ವಸ್ತು ಪ್ರದರ್ಶನದಲ್ಲಿ ಅಜೋಲ್ಲಾ ಕೃಷಿ, ಸೆರಿ-ಸುವರ್ಣ, ನ್ಯೂಟ್ರಿ-ಪಕೋಡ, ರಾಗಿ ಮಾಲ್ಟ್, ಬೀಜೋಪಚಾರ,  ಕೀಟನಾಶಕಗಳನ್ನು  ಬಳಸುವ ಮುನ್ನ  ವಹಿಸಬೇಕಾದಂತಹ ಕ್ರಮಗಳು, ಕೈತೋಟ ಪ್ರಾತ್ಯಕ್ಷಿತೆ, ಮಣ್ಣು ಪರೀಕ್ಷೆ, ಎರೆಹುಳು ಗೊಬ್ಬರದ ಪ್ರಾತ್ಯಕ್ಷಿಕೆ, ಜಾಗೃತ ಅನ್ವೇಷಣೆ ಬಗ್ಗೆ ಪ್ರಾತ್ಯಕ್ಷಿಕೆಗಳು ನಡೆಸಲಾಯಿತು.
ರೈತ ತರಬೇತಿ, ಪಶು, ಮಣ್ಣು, ಆರೋಗ್ಯ, ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು, ರಾಗಿ ಬೀಜೋಪಚಾರ, ಟೋಮೆಟೋ ಬೆಳೆಯ  ಕೀಟ ನಿರ್ವಹಣೆ, ಅಜೋಲ್ಲಾ, ಟ್ರಾಪಿಕೇಟರ್ ಸಾಲು ಬಿತ್ತನೆ, ರಾಗಿ ಕೃಷಿಯಲ್ಲಿ ಸಮಗ್ರ ಬೇಸಾಯ ಪದ್ಧತಿ , ಜೈವಿಕ- ಎರೆಹುಳು ಗೊಬ್ಬರಗಳ ಬಗ್ಗೆ ಮಾಹಿತಿ, ರಾಗಿ ಸಸಿ ಮಡಿ ತಯಾರಿಕೆ, ಕಾಂಪೋಸ್ಟಿಕರಣ, ಸೆರಿಬೂಸ್ಟ್ ಮತ್ತು ಸೆರಿಕೇರ್, ಊಜಿ ಟ್ರ್ಯಾಪ್ಗಳ, ರಾಗಿ ತಳಿಗಳ, ಬಿತ್ತನೆ ಬೀಜ ಸಂಗ್ರಹಣೆ ಬಗ್ಗೆ ಮಾಹಿತಿ, ಹೊಸ ಅನ್ವೇಷಣೆಗಳ ಮತ್ತು  ತಂತ್ರಜ್ಞಾನಗಳ ತಿಳಿವಳಿಕೆ,  ಜೀವಾಮೃತ ತಯಾರಿಕೆ,  ಹಸಿರು ಮನೆಯ ಉಪಯೋಗಗಳು, ಸ್ತ್ರೀ ಶಕ್ತಿ ಸಂಘದ, ಹಸಿರೆಲೆ ಗೊಬ್ಬರ, ಲಘುಪೋಷಕಾಂಶಗಳ  ಮಹತ್ವದ ಬಗ್ಗೆ ಮಾದರಿಗಳ ಪ್ರದರ್ಶನದ ಮೂಲಕ ಗ್ರಾಮಸ್ತರಿಗೆ ಅರಿವು ಮೂಡಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement