ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Rashmi Kasaragodu
Updated On : 5 Oct 2013, 12:37 pm

ಚಿಂತಾಮಣಿ: ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ನಾರಾಯಣರೆಡ್ಡಿ ಪಟ್ಟಣದ ಡಾಲ್ಫಿನ್ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದಾನಗಳಲ್ಲಿ ಮಹಾದಾನವೇ ರಕ್ತದಾನ ಶಾಲಾ ಆಡಳಿತ ಮಂಡಳಿ ಹಮ್ಮಿಕೊಂಡಿರುವುದು ಸಂತಸದ ವಿಚಾರಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ವೇಮನಾರಾಯಣ್, ರಕ್ತದಾನ ಮಾಡಿ ಜನರ ಪ್ರಾಣ ಉಳಿಸಿ ಎಂದು ವಿನಂತಿಸಿದರು. ತಾಲೂಕು ದಂಡಾಧಿಕಾರಿ ಮಂಜುನಾಥ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ. ರಂಗಯ್ಯ ಪ್ರಶಂಸೆ ವ್ಯಕ್ತಪಡಿಸಿದರು. ರಜನಿಕಮಲೇಷ್, ಕಿ.ವಿ. ಶ್ರೀನಿವಾಸ್, ರಾಧಿಕಾಶ್ರೀನಿವಾಸ್, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ಸಹಕರಿಸಿದರು. ಸುಮಾರು 122 ಯೂನಿಟ್ ರಕ್ತ ಸಂಗ್ರಹ ಮಾಡುವಲ್ಲಿ ಈ ಶಾಲೆ ಹೆಗ್ಗಳಿಕೆ ಗಳಿಸಿದೆ.
ಸೌಲಭ್ಯಗಳು ಸದುಪಯೋಗವಾಗಲಿ
ಚಿಂತಾಮಣಿ: ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋನಪ್ಪಲ್ಲಿ ಗ್ರಾಪಂ ಅಧ್ಯಕ್ಷ ಕೆ.ಎಸ್. ಬಾಬುರೆಡ್ಡಿ ಕರೆ ನೀಡಿದರು.
ತಾಲೂಕಿನ ಕೋನಪ್ಪಲ್ಲಿ ಗ್ರಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 2014-15 ನೇ ಸಾಲಿನ ಕಾಮಗಾರಿಗಳ ಕ್ರಿಯಾ ಯೋಜನೆ ಮತ್ತು ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಗವಿಕಲರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಸ್ವಾವಲಂಭಿಗಳಾಗಿ ಬದುಕಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಾಮಕ್ಕ, ಸದಸ್ಯರಾದ ಕೆ.ಎಂ. ವೆಂಕಟರವಣಸ್ವಾಮಿ, ಕೆ.ವೈ. ಆಂಜಪ್ಪ, ಬೈರಾರೆಡ್ಡಿ, ನರಸಿಂಹಯ್ಯ, ನಾನಪ್ಪ, ಶಿವಾರೆಡ್ಡಿ, ಪ್ರಮೀಳಮ್ಮ ನಾರಾಯಣಸ್ವಾಮಿ, ತಾಪಂ ಸದಸ್ಯ ಎನ್. ನಾಗರಾಜ್, ನಾರಾಯಣಸ್ವಾಮಿ ಇದ್ದರು.
'ಹೊಳೆ ಜಂಗಮನ ಜೋಳಿಗೆ' ಲೋಕಾರ್ಪಣೆ'
ಬೆಂಗಳೂರು: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ  ಹಾಗೂ ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ಸಂಯುಕ್ತಾಶ್ರಯದಲ್ಲಿ ಮಂಡ್ಯದ ಯುವ ಸಾಹಿತಿ ಟಿ. ಸತೀಶ್ ಜವರೇಗೌಡರವರ “ÔÚæà׿ ಜಂಗಮನ eæàÞØVæ’ ಕವನ ಸಂಕಲನವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರರು ಲೋಕಾರ್ಪಣೆ ಮಾಡಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಕವನ ಸಂಕಲನ ಬಿಡುಗಡೆ ಮಾಡಿ, ಯುವ ಚೇತನ ಪ್ರಶಸ್ತಿ ಪ್ರದಾನ ಮಾಡಿದ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, ಮಾಂತ್ರಿಕತೆ ಹಾಗೂ ನಿಗೂಢತೆ ಸೃಜನಶೀಲ ಕಾವ್ಯದ ಮುಖ್ಯ ಗುಣ. ಇವೆರಡು ಕೂಡಿದಾಗ ಸತ್ವಶಾಲಿಯಾದ ಕಾವ್ಯ ಸೃಷ್ಟಿಯಾಗುತ್ತದೆ ಎಂದರು.
ಅಪ್ಪಟ ಪ್ರೀತಿಯ ದೀವಟಿಗೆ: ಮಾಂತ್ರಿಕತೆ ಹಾಗೂ ನಿಗೂಢತೆಯನ್ನು ಮೈಗೂಡಿಸಿಕೊಂಡ ಕವಿ ಸತೀಶ್ ಜವರೇಗೌಡ ತಮ್ಮ ಕಾವ್ಯದಲ್ಲಿ ವಿರೋಧಿಗಳ ಕೈಯಲ್ಲಿ ಆಯುಧಗಳಿವೆ, ನನ್ನೆದೆಯ ಒಳಗೆ ಅಪ್ಪಟ ಪ್ರೀತಿಯ ದೀವಟಿಗೆಗಳಿವೆ ಎಂದು ಪರಿಣಾಮಕಾರಿಯಾಗಿ ಬರೆದು ಭರವಸೆ ಮೂಡಿಸಿದ್ದಾರ ಎಂದು ಬಣ್ಣಿಸಿದರು. ಹೊಳೆ ಜಂಗಮನ ಜೋಳಿಗೆ ಕವನ ಸಂಕಲನ ಕುರಿತು ವಿಮರ್ಶಕ ಡಾ.ಎಲ್.ಎನ್. ಮುಕುಂದರಾಜ್ ಮಾತನಾಡಿ, ಸತೀಶ್ ಜವರೇಗೌಡರ ಈ ಕೃತಿ ರೂಪಕ, ಪ್ರತಿಮೆ ಮತ್ತು ಸಂಕೇತಗಳ ಮೂಲಕ ಕವಿತೆಯ ಆಂತರ್ಯವನ್ನು ಹಿಡಿದುಕೊಟ್ಟಿದೆ ಎಂದರು.
ಉತ್ತಮ ಪ್ರತಿಭಾವಂತ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪ್ರತಿಭಾವಂತರು ಇದ್ದಾರೆ. ಆದರೆ ಅವರಿಗೆ ಅವಕಾಶಗಳ ಕೊರತೆ ಇದೆ. ಹೀಗಾಗಿ ಬೆಳಕಿಗೆ ಬರಲು ಅನೇಕ ಪ್ರತಿಭೆಗಳಿಗೆ ಸಾಧ್ಯವಾಗುತ್ತಿಲ್ಲ. ತಮ್ಮ ಕಾವ್ಯದ ಮೂಲಕ ತಾವೂಬ್ಬ ಉತ್ತಮ ಕವಿ ಎಂದು ಸತೀಶ್ ನಿರೂಪಿಸುತ್ತಿದ್ದಾರೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement