ಅಕ್ರಮ ಮರಳು ಅಡ್ಡೆ ಮೇಲೆ ದಾಳಿ
ಮುಳಬಾಗಲು: ತಾಲೂಕಿನ ತಾಯಲೂರು ಹೋಬಳಿ ಆರ್. ಗಡ್ಡೂರು ಮತ್ತು ಪುಲಿ ಓಬಿರೆಡ್ಡಿಹಳ್ಳಿ ಗ್ರಾಮಗಳಲ್ಲಿ ಶನಿವಾರ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿದ ಕಂದಾಯ ಇಲಾಖೆ ಅಧಿಕಾರಿಗಳು ಹತ್ತಕ್ಕೂ ಹೆಚ್ಚು ಎಂಜಿನ್ಗಳನ್ನು ನಾಶಪಡಿಸಿದರು.
ಎರಡು ಟ್ರ್ಯಾಕ್ಟರ್, ಒಂದು ಜೆಸಿಬಿ ಯಂತ್ರ ವಶಪಡಿಸಿಕೊಂಡರು. ದಾಳಿ ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ನೇತೃತ್ವದಲ್ಲಿ ನಡೆದಿದ್ದು, ರಾಜಸ್ವ ನಿರೀಕ್ಷಕ ಬಿ.ವಿ. ರೆಡ್ಡಪ್ಪಗುಪ್ತ, ನರೇಶ, ಸುಧಾಕರ್, ನಟರಾಜ್ ಭಾಗವಹಿಸಿದ್ದರು.