ಪೌರಕಾರ್ಮಿಕರಿಗೆ ಕ್ರೀಡಾಕೂಟ
ಕೆಜಿಎಫ್: ನಗರಸಭೆ ಕಾರ್ಮಿಕರು ನಗರವನ್ನು ಸ್ವಚ್ಛಗೊಳಿಸುವಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಅವರ ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿ ನೀಡಲು ಕ್ರೀಡೆಗಳು ಸಹಾಯಕಾರಿಯಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೆಜಿಎಫ್ ಶಾಖೆ ವ್ಯವಸ್ಥಾಪಕ ಸಿಬ್ರಮಣಿಯಂ ತಿಳಿಸಿದರು.
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ನಗರಸಭೆ ಆಯುಕ್ತ ವಿ. ಬಾಲಚಂದ್ರ ನೇತೃತ್ವದಲ್ಲಿ ಪೌರಕಾರ್ಮಿಕರಿಗೆ ನಗರಸಭಾ ಮೈದಾನದಲ್ಲಿ ಏರ್ಪಡಿಸಿದ್ದ ಕ್ರೀಡೆಗಳ ಉದ್ಘಾಟಿಸಿ ಮಾತನಾಡಿದರು. ಉತ್ಸಾಹದಿಂದ ಪೌರಕಾರ್ಮಿಕರು ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಈ ವೇಳೆ ಎಸ್ಬಿಎಂ ಅಧಿಕಾರಿ ಎನ್.ಆರ್. ಪುರುಷೋತ್ತಮ, ನಗರಸಭಾ ಪೌರಾಯುಕ್ತ ವಿ. ಬಾಲಚಂದ್ರ, ಕಾರ್ಯಪಾಲಕ ಅಭಿಯಂತರ ಶ್ರೀಧರ್, ಹಿರಿಯ ಆರೋಗ್ಯಾಧಿಕಾರಿ ಸರಸ್ವತಿ, ಅಖಿಲಾಬಾನು, ಹರಿನಾಥ್, ರವೀಂದ್ರ, ಕೃಷ್ಣಮೂರ್ತಿ, ವ್ಯವಸ್ಥಾಪಕ ನಂಜುಂಡಸ್ವಾಮಿ, ಜಯರಾಮ್ ಹಾಜರಿದ್ದರು.