ಮೂಲೆಗುಂಪಾದ ಬ್ಯಾರಿಕೇಡ್
ಕೆಜಿಎಫ್: ಪೊಲೀಸ್ ಇಲಾಖೆಗೆ ಸೇರಿದ ಬ್ಯಾರಿಕೇಡ್ ಎಂ.ಜಿ. ಮಾರುಕಟ್ಟೆಯಲ್ಲಿ ಮೂಲೆ ಗುಂಪಾಗಿದ್ದು ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯತೆ ಬಗ್ಗೆ ಮಾರುಕಟ್ಟೆ ವ್ಯಾಪಾರಸ್ಥರು ಅಸಮಾದಾನ ವ್ಯಕ್ತಪಡಿಸಿದ್ದಾರೆ. ತುರ್ತು ಸಮಯಗಳಲ್ಲಿ ಈ ಬ್ಯಾರಿಕೇಡ್ಗಳನ್ನು ಉಪಯೋಗಿಸಲಾಗುತ್ತದೆ. ಆದರೆ ಸುಮಾರು ವರ್ಷಗಳಿಂದ ಎಂ.ಜಿ. ಮಾರುಕಟ್ಟೆಯಲ್ಲಿ ತುಕ್ಕು ಹಿಡಿಯುತ್ತಿವೆ.
ಇತ್ತೀಚೆಗೆ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಪಿಎಸ್ಐ ರಂಗಸ್ವಾಮಯ್ಯ ನಗರಸಭೆ ಬಸ್ ನಿಲ್ದಾಣಕ್ಕೆ ಖುದ್ದಾಗಿ ಭೇಟಿ ನೀಡಿ, ನಿಯಮವಿಲ್ಲದೆ ಬಸ್ಸುಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದಕ್ಕೆ ಮಾಲೀಕರಿಗೆ ಹಾಗೂ ಚಾಲಕರಿಗೆ ಎಚ್ಚರಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಲ್ಲಿಸುವಂತೆ ಸೂಚಿಸಿದ್ದು ಅದನ್ನು ಪಾಲಿಸದ ಬಸ್ಸುಗಳಿಗೆ ದಂಡ ವಸೂಲಿ ಮಾಡಿದ್ದರು. ಇದರಿಂದ ಬಸ್ ನಿಲ್ದಾಣ ಅಚ್ಚುಕಟ್ಟಾಗಿ ಕಾಣುತ್ತಿದೆ.