ರಾಜ್ಯಮಟ್ಟಕ್ಕೆ ಆಯ್ಕೆ
ಮಾಲೂರು: ಇಲ್ಲಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಕೋಲಾರದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಉತ್ತಮ ಪ್ರದರ್ಶನ ತೋರಿ ವಾಲಿಬಾಲ್, ಟೆನಿಕಾಯ್ಟ್, ಬಾಲ್ಬ್ಯಾಂಡ್ಮಿಟನ್ ಮತ್ತು ಚದುರಂಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳು ರಾಜ್ಯ ಮಟ್ಟದಲ್ಲೂ ಉತ್ತಮ ಪ್ರದರ್ಶನ ತೋರಿ ಕಾಲೇಜು ಹಾಗೂ ಊರಿಗೆ ಹೆಸರು ತರಲಿ ಎಂದು ಕಾಲೇಜಿನ ಪ್ರಾಂಶುಪಾಲ ಕೆ. ವೆಂಕಟೇಶಪ್ಪ, ಎಂ. ರಾಜಶೇಖರ್, ಆರ್. ವೆಂಕಟೇಶ್, ಕೆ. ರವೀಂದ್ರ ಅಭಿನಂದಿಸಿದ್ದಾರೆ.