ಎಪಿಎಂಸಿಗೆ ಎಂಎಲ್ಸಿ ವೀರಯ್ಯ ಭೇಟಿ
ಕೋಲಾರ: ವಿಧಾನ ಪರಿಷತ್ ಹಿರಿಯ ಸದಸ್ಯ ಡಿ.ಎಸ್. ವೀರಯ್ಯನವರು ನಗರ ಹೊರವಲಯದ ಎ.ಪಿ.ಎಂ.ಸಿ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿ ಕೊಂದು-ಕೊರತೆ ಅಲಿಸಿದರು.
ಈ ಸಂದರ್ಭದಲ್ಲಿ ಮಾರುಕಟ್ಟೆಯ ಮಂಡಿ ಮಾಲೀಕರು, ರೈತರು, ಕಾರ್ಮಿಕರು ಹಾಗೂ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಮಾರುಕಟ್ಟೆಯ ಅಭಿವೃದ್ಧಿ ಕುರಿತು ಚರ್ಚಿಸಿದರು.
ಮಾರುಕಟ್ಟೆಯಲ್ಲಿ ಕೊರತೆಯಿರುವ ರಸ್ತೆಗಳು, ಹೆಚ್ಚುವರಿ ಶೌಚಾಲಯ ನಿರ್ಮಾಣ, ಪ್ರಸ್ತುತ ಇರುವ ಶೌಚಾಯಗಳ ದುರಸ್ತಿ ಹಾಗೂ ನಿರ್ವಹಣೆ, ಹಾದು ಹೋಗಿರುವ ಅಧಿಕ ವಿದ್ಯುತ್ ಪ್ರವಹಿಸುವ ವಿದ್ಯುತ್ ತಂತಿಗಳ ಮಾರ್ಗ ಬದಲಾವಣೆ, ಖಾಲಿಯಿರುವ ಹುದ್ದೆಗಳ ಭರ್ತಿ, ತ್ಯಾಜ್ಯ ವಿಲೇವಾರಿ ಹಾಗೂ ವಿಸರ್ಜನೆಗೆ ಸ್ಥಳ, ಕಾರ್ಮಿಕರ ಶ್ರಮಿಕ ಭವನ ಇತ್ಯಾದಿ ಸಮಸ್ಯೆಗಳು ಕಂಡಬಂದವು.
ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಡಿ.ಎಸ್. ವೀರಯ್ಯ ಅವರು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಸೋಮಶೇಖರ್, ಮಾರ್ಕೆಟ್ ಕೆಂಪ್ಪಣ್ಣ, ರಂಗಾರೆಡ್ಡಿ, ಗಾಂಧಿನಗರ ವೆಂಕಟೇಶ್, ಆಟೋ ನಾರಾಯಣಸ್ವಾಮಿ, ರಾಜೇಂದ್ರ ಇದ್ದರು. ಎ.ಪಿ.ಎಂ.ಸಿ ಕಾರ್ಯದರ್ಶಿ ಜಿ. ನಾರಾಯಣರಾಜು ಶಾಸಕರಿಗೆ ಎಪಿಎಂಸಿಯ ಮಾಹಿತಿ ನೀಡಿದರು.