ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿನ್ನಾಭರಣ ಕಸಿದ ದುಷ್ಕರ್ಮಿಗಳು

Mainashree
Updated On : 7 Oct 2013, 12:05 pm

ಚಿಕ್ಕಬಳ್ಳಾಪುರ: ಮಹಿಳೆಯೊಬ್ಬರಿಗೆ ತಾವು ಪೊಲೀಸರೆಂದು ಹೇಳಿ ಚಿನ್ನಾಭರಣವನ್ನು ಕಸಿದು ಪರಾರಿಯಾಗಿರುವ ಘಟನೆ ಭಾನುವಾರ ನಗರದಲ್ಲಿ ನಡೆದಿದ್ದು, ಇದು ಜಿಲ್ಲೆಯಲ್ಲಿ ಎರಡನೇ ಪ್ರಕರಣವಾಗಿದೆ.
ನಗರದ ನಗರ್ತರ ಪೇಟೆಯ ನಿವಾಸಿ ಚೆನ್ನಮ್ಮ ಅರಳಿ ಮರದ ಕಟ್ಟೆಯ ಬಳಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುವಾಗ ಬೈಕಿನಲ್ಲಿ ಇಬ್ಬರು ದುಷ್ಕರ್ಮಿಗಳು ಬಂದು, ನಾವು ಮಫ್ತಿಯಲ್ಲಿರುವ ಪೊಲೀಸರು ಎಂದು ನಂಬಿಸಿ, ಒಬ್ಬರೇ ಹೀಗೆಲ್ಲಾ ಒಡವೆಗಳನ್ನು ಹಾಕಿಕೊಂಡು ಹೋಗಬಾರದು.ಬಟ್ಟೆಯಲ್ಲಿ ಹಾಕಿಕೊಂಡು ಜೋಪಾನವಾಗಿ ಎತ್ತಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.
ಇದನ್ನು ನಂಬಿದ ಚೆನ್ನಮ್ಮ ತಮ್ಮ ಕೊರಳಿನಲ್ಲಿದ್ದ 35 ಗ್ರಾಮ ಚೈನು, ಓಲೆ ಮತ್ತು ಒಡವೆಗಳನ್ನು ಪೇಪರಿನಲ್ಲಿ ಹಾಕಿಕೊಂಡಿದ್ದು, ನಾವು ಸರಿಯಾಗಿ ಪೇಪರಿನಲ್ಲಿಟ್ಟುಕೊಡುತ್ತೇವೆ ಎಂದು ದುಷ್ಕರ್ಮಿಗಳು ಸಹಾಯ ಮಾಡುವಂತೆ ನಟಿಸಿದ್ದಾರೆ. ನಂತರ ಪೇಪರನ್ನು ಕೊಟ್ಟು ತೆಗೆದುಕೊಂಡು ಹೋಗಿ ಎಂದು ಕಳುಹಿಸಿದ್ದಾರೆ. ಅವಸರದಲ್ಲಿ ತಮ್ಮ ಮನೆಗೆ ವಾಪಸ್ ಬಂದ ಚೆನ್ನಮ್ಮ ಪೇಪರ್ ಬಿಚ್ಚಿದಾಗ ಅದರೊಳಗೆ ಕಲ್ಲು ಇತ್ತು ಎನ್ನಲಾಗಿದೆ. ತಕ್ಷಣ ತಮ್ಮ ಸಂಬಂಧಿಕರೊಂದಿಗೆ ನಗರ ಪೊಲೀಸ್ ಠಾಣೆಗೆ ಬಂದು ದೂರನ್ನು ಸಲ್ಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಳೆದ ಎರಡು ವಾರಗಳ ಹಿಂದೆ ಚಿಂತಾಮಣಿ ತಾಲೂಕಿನಲ್ಲೂ ಇಂತಹ ಘಟನೆ ನಡೆದಿದ್ದು ತಾವು ಮಫ್ತಿಯಲ್ಲಿರುವ ಪೊಲೀಸರೆಂದು ನಂಬಿಸಿ ಕಾಪಾಡುವ ನೆಪದಲ್ಲಿ ಮಹಿಳೆಯೊಬ್ಬರಿಂದ ಒಡವೆಗಳನ್ನು ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement