ಬೀಳ್ಕೊಡುಗೆ ಸಮಾರಂಭ
ಚಿಕ್ಕಬಳ್ಳಾಪುರ: ಕೆಲಸದ ಒತ್ತಡದ ನಡುವೆಯೂ ಆತ್ಮೀಯತೆ ಬೆಸೆದುಕೊಂಡು ಕರ್ತವ್ಯ ನಿರ್ವಹಿಸುವುದರಲ್ಲಿ ಭಾವುಕತೆ ಬೆಳೆಯಲಿದೆ ಎಂದು ವರ್ಗಾವಣೆಗೊಂಡ ತಾಪಂ ಕಾರ್ಯ ನಿರ್ವಹಣಾಧಿಕಾರಿ ಶಶಿಕುಮಾರ್ ಅಭಿಪ್ರಾಯಪಟ್ಟರು.
ತಾಪಂ ಸಭಾಂಗಣದಲ್ಲಿ ತಾಪಂ ಸಿಬ್ಬಂದಿ, ಗ್ರಾಪಂ ಕಾರ್ಯದರ್ಶಿ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಾಪಂ ಪ್ರಭಾರಿ ಕಾರ್ಯ ನಿರ್ವಹಣಾಧಿಕಾರಿ ಗಣೇಶ ಸಾಕರೆ ಮಾತನಾಡಿ, ಕೆಲಸ ಮಾಡುವ ಸಂದರ್ಭದಲ್ಲಿ ಅನ್ಯೋನ್ಯತೆ ಇಟ್ಟುಕೊಂಡು ಕರ್ತವ್ಯ ನಿಭಾಯಿಸುವುದೇ ಜಾಣ್ಮೆ. ಇಂತಹ ಜಾಣ್ಮೆಯಿಂದ ಕೆಲಸ ಮಾಡಿದ ಶಶಿಕುಮಾರ್ ಮುಂದಿನ ದಿನಗಳಲ್ಲಿ ಇನ್ನು ಉನ್ನತ ಮಟ್ಟದ ಅಧಿಕಾರಿಯಾಗಿ ಬೆಳೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಚಂದ್ರಪ್ಪ, ಗ್ರಾಪಂ ಕಾರ್ಯದರ್ಶಿ ಚಿಕ್ಕನರಸಿಂಹಯ್ಯ, ತಾಪಂ ಕಚೇರಿಯ ಶ್ರೀನಿವಾಸ್ ಉಪಸ್ಥಿತರಿದ್ದರು.