ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಿನಿ ಉದ್ಯೋಗ ಮೇಳ

Mainashree
Updated On : 6 Oct 2013, 11:55 am

ಬಾಗೇಪಲ್ಲಿ: ನಿರುದ್ಯೋಗಿ ಸಮಸ್ಯೆಯನ್ನು ಕ್ಷೇತ್ರದಲ್ಲಿ ತೊಲಗಿಸುವುದೇ ಮುಖ್ಯ ಗುರಿ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ, ಎಸ್.ಎನ್. ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಿನಿ ಉದ್ಯೋಗ ಮೇಳವನ್ನು ಉದ್ಟಾಟಿಸಿ ಮಾತನಾಡಿ, ಕ್ಷೇತ್ರ ಹಿಂದುಳಿದ ಪ್ರದೇಶವಾಗಿದೆ. 4 ವರ್ಷಗಳಿಂದ ಸಕಾಲಕ್ಕೆ ಮಳೆಯಿಲ್ಲದೇ ರೈತರು ಜೀವನ ಸಾಗಿಸಲು ವಲಸೆ ಹೋಗುತ್ತಿದ್ದಾರೆ. ಈ ವಲಸೆ ತಪ್ಪಿಸುವ ನಿಟ್ಟನಲ್ಲಿ ಮಿನಿ ಉದ್ಯೋಗ ಮೇಳದ ಮೂಲಕ ಉದ್ಯೋಗ ಸಿಗುವಂತೆ ಮಾಡುತ್ತಿದ್ದೇನೆ ಎಂದರು.
ತಹಸೀಲ್ದಾರ್ ಎಂ.ಎ. ಪದ್ಮ, ಲೋಕೋಪಯೋಗಿ ಇಲಾಖೆಯ ಜೆ. ಕೃಷ್ಣಮೂರ್ತಿ, ಎಇಇ ಪಿ.ವಿ. ನಾಗಪ್ಪ, ಚೆಂಡೂರು ವೆಂಕಟೇಶ್, ಪುರಸಭೆ ಮುಖ್ಯಾಧಿಕಾರಿ ಶ್ರೀಕಾಂತ್, ಸಿ.ಡಿ.ಪಿ.ಓ. ಲಕ್ಷ್ಮೀದೇವಮ್ಮ, ಜಯಪ್ರಕಾಶ್ ನಾರಾಯಣ್, ಆರಕ್ಷಕ ವೃತ್ತ ನಿರೀಕ್ಷಕ ಸಿ. ವಸಂತ್, ಶ್ರೀನಿವಾಸರೆಡ್ಡಿ ಇದ್ದರು.
ಉದ್ಯೋಗ ಮೇಳದಲ್ಲಿ ಒಟ್ಟು 1,031 ಅಭ್ಯರ್ಥಿಗಳು ಭಾಗವಹಿಸಿದು,್ದ 16 ಸಂಸ್ಥೆಗಳು ಭಾಗವಹಿಸಿದ್ದವು. 124 ನಿರುದ್ಯೋಗಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಯಿತು. 156 ಜನರಿಗೆ ಶೀಘ್ರ ಉದ್ಯೋಗ ದೊರೆಯುವ ನೀರೀಕ್ಷೆಯಿದೆ. ತರಬೇತಿಗಾಗಿ 230 ಮಂದಿ ಆಯ್ಕೆಯಾಗಿದ್ದಾರೆ. 6 ಮಂದಿ ಅಂಗವಿಕಲರು ಉದ್ಯೋಗವನ್ನು ಪಡೆದುಕೊಂಡಿರುವುದ ವಿಶೇಷವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement