ವಾಹನಗಳ ದುರಸ್ತಿಗೆ ಡಿಸಿ ಸೂಚನೆ
ಶ್ರೀನಿವಾಸಪುರ: ತಾಲೂಕು ದಂಡಾಧಿಕಾರಿಗಳಿಗೆ ನೀಡಿದ್ದ ಎರಡು ಜೀಪುಗಳು ಕಳೆದ 4 ವರ್ಷಗಳಿಂದ ಕೆಟ್ಟು ಮೂಲೆಗುಂಪಾಗಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಕೆಟ್ಟಿರುವ ಜೀಪುಗಳನ್ನು ರಿಪೇರಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟುವುಂಟಾಗದಂತೆ ಎಚ್ಚರಿಕೆ ವಹಿಸುವಂತೆ ಇಲ್ಲಿನ ತಾಲೂಕು ದಂಡಾಧಿಕಾರಿಗಳಿಗೆ ತಾಕೀತು ಮಾಡಿದರು. ಕೋಲಾರ ಜಿಲ್ಲಾಧಿಕಾರಿ ಸಿ.ಕೆ. ರವಿ ಅವರು ಶ್ರೀನಿವಾಸಪುರ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ತಿಳಿಸಿದರು.