'ಸರ್ವಪಲ್ಲಿ ರಾಧಾಕೃಷ್ಣ ಅವರ ಆದರ್ಶ ಪಾಲಿಸಿ'
ಕೆಜಿಎಫ್: ಸರ್ವಪಲ್ಲಿ ರಾಧಾಕೃಷ್ಣ ಅವರ ಆದರ್ಶಗಳನ್ನು ಪಾಲಿಸಲು ಶಿಕ್ಷರು ಮುಂದಾಗಬೇಕು ಎಂದು ಶಾಸಕಿ ವೈ. ರಾಮಕ್ಕ ಹೇಳಿದರು.
ಕೆಜಿಎಫ್ ವಲಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಶಿಕ್ಷಕರು ನಗರದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮಾಜಿ ಶಾಸಕ ವೈ. ಸಂಪಂಗಿ ಮಾತನಾಡಿ, ತಂದೆ ತಾಯಿಗಳು ದೇವರಿಗೆ ಸಮಾನ ಅದರಲ್ಲೂ ಶಿಕ್ಷಕರು ಪ್ರಥಮ ಎಂದು ಎಲ್ಲರೂ ಅರಿಯಬೇಕಿದೆ ಎಂದರು.
ಪೊಲೀಸ್ ಉಪರಕ್ಷಣಾಧಿಕಾರಿ ವಿವೇಕಾನಂದ ಅವರು, ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನಿವೃತ್ತಿ ಎಂಬುದು ಇರುತ್ತದೆ ಆದರೆ ಶಿಕ್ಷಕರು ನಿವೃತ್ತಿ ಹೊಂದಿದ ನಂತರವೂ ನೀತಿ ಪಾಠಗಳನ್ನು ಹೇಳುವ ಗುರುಗಳು ಎಂದು ಕರೆಸಿಕೊಳ್ಳುತ್ತಾರೆ ಎಂದು ತಿಳಿಸಿದರು. ಮುನಿಯಪ್ಪ, ಅರ್ಜುನನ್, ಗೋಪಿನಾಥ್, ಕಿರಣ್‌ಕುಮಾರ್, ಪ್ರಭಾಕರ್, ಆರೀಫ್‌ಅಹ್ಮದ್, ರಾಜಶ್ರೀ, ನರಸಿಂಹಲು, ಸುರೇಶ್‌ನಾರಾಯಣಕುಟ್ಟಿ, ಬಾಟಾ ಗೋಪಾಲ್, ನಗರಸಭಾ ಸದಸ್ಯರಾದ ವಿಜಯಕುಮಾರ್ ಇದ್ದರು.