ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುದ್ದಿ ಸಂಕ್ಷೇಪ

Mainashree
Updated On : 6 Oct 2013, 11:54 am

ಚಿಕ್ಕಬಳ್ಳಾಪುರ: ನಗರದ ಸರ್.ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಅ.7 ರಂದು ಬೆಳಗ್ಗೆ 10.30 ಕ್ಕೆ
2013-14ನೇ ಸಾಲಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಮೇಲಾಟಗಳ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಸಭೆ ಉಪಾಧ್ಯಕ್ಷ ಎನ್.ಹೆಚ್. ಶಿವಶಂಕರ್ ರೆಡ್ಡಿ ನೆರವೇರಿಸಲಿದ್ದು ಶಾಸಕ ಡಾ.ಕೆ.ಸುಧಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಯ್ಲಿ, ಕೆ.ಹೆಚ್. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಜಿ.ಪಂ. ಅಧ್ಯಕ್ಷ ಎಸ್.ಎನ್.ಚಿನ್ನಪ್ಪ, ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಶಾಸಕರಾದ ಎಂ. ರಾಜಣ್ಣ, ಎಸ್.ಎನ್. ಸುಬ್ಬಾರೆಡ್ಡಿ, ಎಂ. ಕೃಷ್ಣಾರೆಡ್ಡಿ, ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಎಸ್ಪಿ ಡಾ.ಎನ್. ಶಿವಪ್ರಸಾದ್, ತಾ.ಪಂ. ಅಧ್ಯಕ್ಷ ಕೆ. ಕೃಷ್ಣಮೂರ್ತಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ಮುಂತಾದವರು ಭಾಗವಹಿಸಲಿದ್ದಾರೆ.
11 ರಂದು ಮಾಸಿಕ ಕೆಡಿಪಿ ಸಭೆ
ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅ.11 ರಂದು ಬೆಳಗ್ಗೆ 11 ಗಂಟೆಗೆ ಮಾಸಿಕ ಕೆಡಿಪಿ ಸಭೆಯನ್ನು ಆಯೋಜಿಸಲಾಗಿದೆ. ಜಿ.ಪಂ. ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ
ಟೇಕಲ್: ಟೇಕಲ್‌ನ ಹುಣಸಿಕೋಟೆಯಲ್ಲಿ ನೂತನವಾಗಿ ಕಟ್ಟಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಅಮೃತವರ್ಷಿಣಿ  ಹಾಗೂ ಬಿಎಂಸಿ ಕೇಂದ್ರದ ಉದ್ಘಾಟನೆ ಸಮಾರಂಭ ಸೋಮವಾರ ಮಧ್ಯಾಹ್ನ 12ಗಂಟೆಗೆ ನೆರವೇರಲಿದೆ. ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಕಟ್ಟಡ ಉದ್ಘಾಟನೆ, ಬಿಎಂಸಿ ಕೇಂದ್ರದ ಉದ್ಘಾಟನೆ ಶಾಸಕ ಕೆ.ಎಸ್. ಮಂಜುನಾಥಗೌಡ, ಸಮಾರಂಭದ ಉದ್ಘಾಟನೆಯನ್ನು ಕೋ.ಚಿ.ಸ.ಹಾ. ಒಕ್ಕೂಟದ ಅಧ್ಯಕ್ಷ ಕೆ. ಗುಡಿಯಪ್ಪನವರಿಂದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ.ವಿ. ಪ್ರಸನ್ನ ವಹಿಸಲಿದ್ದು, ಜಿ.ಪಂ. ಸದಸ್ಯೆ ರತ್ನಮ್ಮನಂಜೇಗೌಡ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಹೆಚ್. ಹನುಮಂತಪ್ಪ, ಮಾಜಿ ಮಂಡಲ ಪ್ರಧಾನರಾದ ಆರ್. ವೆಂಕಟೇಶಗೌಡ, ಕೆ.ಜಿ. ಹಳ್ಳಿ ಅಧ್ಯಕ್ಷೆ ಲಕ್ಷ್ಮಮ್ಮ ರಮೇಶ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಸಂಘ ತಿಳಿಸಿದೆ.
21 ಅಡಿಗಳ ಬೃಹತ್ ಗಣಪ ಸ್ಥಾಪನೆ
ಮಾಲೂರು: ಪಟ್ಟಣದ ಕುಪ್ಪಶೆಟ್ಟಿ ಬಾವಿ ಬಳಿಯ ವರಸಿದ್ಧಿ ವಿನಾಯಕ ದೇವಾಲಯ ಅವರಣದಲ್ಲಿ ಸ್ಥಾಪಿಸಿರುವ ಶ್ರೀ ವೆಂಕಟರಮಣಸ್ವಾಮಿ ಗರುಡವಾಹನ ಸಮೇತ ಮಹಾವಿಷ್ಣು ಅವತಾರದ ಮಹಾಗಣಪ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಇಲ್ಲಿನ ಕನ್ನಡ ಅಭಿಮಾನಿಗಳ ಬಳಗ ಸ್ಥಾಪಿಸಿರುವ 21 ಅಡಿಗಳ ಬೃಹತ್ ಗಣಪನನ್ನು ವೀಕ್ಷಿಸಲು ದಿನ ನಿತ್ಯ ಜನ ಸಾಗರ ಸೇರುತ್ತಿದ್ದು, ಭಕ್ತರಿಗಾಗಿ ಪ್ರತಿನಿತ್ಯ ಪಾಪ್‌ಸಿಂಗ್ ವೇದಿಕೆಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. 41 ದಿನಗಳ ಗಣಪನನ್ನು ನೋಡಲು ಬಳಗದವರು ಎಳು ಬಾಗಿಲನ್ನು ನಿರ್ಮಿಸಿದ್ದು, ಭಕ್ತರು ಶ್ರೀ ಶೈಲ,ಶ್ರೀ ಶೇಷ, ಗರುಡಾಚಲ, ವೆಂಕಟಾದ್ರಿ,ನಾರಾಯಣಾದ್ರಿ, ವೃಷಬಾದ್ರಿ, ವೃಷಾದ್ರಿ ಬಾಗಿಲನ್ನು ದಾಟಿ ಶ್ರೀವೆಂಕಟಾದ್ರಿ ಗಣಪನ ದರ್ಶನ ಮಾಡುವ ವ್ಯವಸ್ಥೆ ಮಾಡಲಾಗಿದೆ. 12 ರ ಶನಿವಾರ ಆನಂದ ಗುರೂಜಿ ರವರರಿಂದ ಮಹರ್ಷಿ ಸಾಂತ್ವನ ಕಾರ್ಯಕ್ರಮದಲ್ಲಿ ಜನತೆಯೊಂದಿಗೆ ನೇರ ಸಂವಾದ, 15 ರಂದು ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲೋಕ, 17 ರಂದು ನೃತ್ಯ ನಿರ್ದೇಶಕ ಯೋಗಿಶ್ ನೇತೃತ್ವದಲ್ಲಿ ನೃತ್ಯ ಕಾರ್ಯಕ್ರಮಗಳು ಪ್ರಮುಖ ಸಾಂಸ್ಕೃತಿಕ ಕಾರಕ್ರಮಗಳು, 19 ರಂದು ಮಹಾ ಗಣಪತಿ ಹೋಮ ನಡೆಯಲಿದ್ದು, 20 ರ ಭಾನುವಾರ ರಾಜ್ಯ ಜನಪದ ಕಲಾ ತಂಡಗಳೂಂದಿಗೆ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ಮೂಲಕ ಗಣಪನನ್ನು ವಿರ್ಸಜಿಸಲಾಗುತ್ತಿದೆ. ಅಂದು ಭಕ್ತರಿಗೆ 25 ಸಾವಿರ ತಿರುಪತಿ ಲಾಡುಗಳನ್ನು ಹಂಚಲಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement