ಅತ್ಯಾಚಾರ ಆರೋಪಿ ಬಂಧನ
ಗೌರಿಬಿದನೂರು: ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ತಾಲೂಕಿನ ಬಾದಿಮರಳೂರು ಗ್ರಾಮದ ಆರೋಪಿ ರಘು ಎಂಬಾತನನ್ನು ಸಿಪಿಐ ನಾಗರಾಜ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಎ.ಬಿ. ದೇವಯ್ಯ ಈ ವಿಷಯ ತಿಳಿಸಿದರು. ಆರೋಪಿ ರಘು ಕೆ.ಆರ್. ಪೇಟೆ ತಾಲೂಕಿನ ಸಂತೇಬಾಚನಹಳ್ಳಿಯಲ್ಲಿರುವ ತನ್ನ ಭಾವ ರಂಗಪ್ಪನ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಘಟನೆಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯುವುದಕ್ಕಾಗಿ ಆತ ತನ್ನ ಗೆಳೆಯರಿಗೆ ಮಾಡುತ್ತಿದ್ದ ಕರೆಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು.