ಇಂದು ಜ್ಯುವಲೆರಿ ಫೆಡರೇಷನ್ ಸಮಾವೇಶ
ಕೆಜಿಎಫ್: ರಾಜ್ಯ ಜ್ಯುವಲೆರಿ ಫೆಡರೇಷನ್ ವತಿಯಿಂದ 2ನೇ ತ್ರೈಮಾಸದ ಸಮಾವೇಶ ಕೆಜಿಎಫ್ನ ಎಚ್ಜಿಆರ್ ರೆಸಾರ್ಟ್ನಲ್ಲಿ ಅ.8ರ ಬೆಳಗ್ಗೆ 10ರಿಂದ ಸಂಜೆ 4.30ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕೆಜಿಎಫ್ ಕ್ಷೇತ್ರದ ಜ್ಯುವಲೆರಿ ಅಸೋಷಿಯೇಶನ್ ಪ್ರಕಟನೆಯಲ್ಲಿ ತಿಳಿಸಿದೆ.
ಸಮಾವೇಶದಲ್ಲಿ ರಾಜ್ಯ ಜ್ಯುವಲೆರಿ ಫೆಡರೇಷನ್ ಅಧ್ಯಕ್ಷ ಜಿ. ಜಯಚಾರ್ಯ ಮತ್ತು ಕಾರ್ಯದರ್ಶಿ ಬಿ. ರಾಮಾಚಾರಿ ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಬಾಗಗಳಿಂದಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಯು .ಸುದರ್ಶನ್ಬೋರಾ ತಿಳಿಸಿದ್ದಾರೆ.