ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಿ: ರೈತ ಸಂಘ

Rashmi Kasaragodu
Updated On : 8 Oct 2013, 1:09 am

ಶ್ರೀನಿವಾಸಪುರ: ಕೋಲಾರ ಜಿಲ್ಲೆಯು ನಿರಂತರವಾಗಿ ಬರಗಾಲಕ್ಕೆ ತುತ್ತಾಗುತ್ತಿದ್ದರೂ ಕನಿಷ್ಠ 5 ವರ್ಷಗಳ ಕಾಲ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ವಿಶೇಷ ಪ್ಯಾಕೇಜ್ ಮುಖಾಂತರ ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ವತಿಯಿಂದ ತಾಲೂಕು ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿ, ಪ್ರತಿಭಟಿಸಿದರು. ಜಿಲ್ಲೆಯಾದ್ಯಂತ ಕಳೆದ 3 ತಿಂಗಳಿನಿಂದ ಕಾಲುಬಾಯಿ ಜ್ವರಕ್ಕೆ ಸುಮಾರು 3 ಸಾವಿರ ಸೀಮೆ ಹಸುಗಳು ಸಾವನ್ನಪ್ಪಿದ್ದು, ಹೈನುಗಾರಿಕೆಯಿಂದ ಜೀವನಗಳನ್ನು ನಡೆಸುತ್ತಿದ್ದಂತಹ ಬಡ ರೈತರಿಗೆ ಲಕ್ಷಾಂತರ ರುಪಾಯಿ ನಷ್ಟವುಂಟಾಗಿದೆ. ಹಸುಗಳನ್ನು ಕೆಳದುಕೊಂಡು ದಿಕ್ಕುತೋಚದೆ ಕಂಗಾಲಾಗಿದ್ದಾರೆ. ಎಪಿಎಂಸಿಗಳಲ್ಲಿ ದಲ್ಲಾಳಿಗಳು ಮೀಟರ್ ಬಡ್ಡಿ ವ್ಯವಹಾರ ನಡೆಸಿ ರೈತರಿಂದ ಹಣ ಸುಲಿಗೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಧರಣಿಯ ನೇತೃತ್ವವನ್ನು ಬಂಗವಾದಿ ನಾಗರಾಜ್ ಹೂವಳ್ಳಿ ನಾಗರಾಜ್, ನಾರಾಯಣಗೌಡ, ಗಂಗಾಧರ, ಬಾಲಾಜಿಸಿಂಗ್, ಶ್ರೀನಿವಾಸ ಗೌಡ ಇತರರು ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement