ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಂಗಭೂಮಿ ಕಲೆ ಗ್ರಾಮೀಣ ಸೊಗಡು: ವರಾಹಮೂರ್ತಿ

Rashmi Kasaragodu
Updated On : 8 Oct 2013, 1:07 am

ಗೌರಿಬಿದನೂರು: ನಾಟಕವು ಮನುಷ್ಯನ ಬದುಕನ್ನು ರಂಗದ ಮೇಲೆ ಬಿಂಬಿಸುವ ಒಂದು ಕಲೆ. ಇಂತಹ ಕಲೆ ಉಳಿಸಿ ಬೆಳೆಸಿದರೆ ನಾಡಿನ ಶ್ರೀಮಂತ ಸಂಸ್ಕೃತಿಯೊಂದು ಉಳಿದು, ಬೆಳೆದಂತಾಗುತ್ತದೆ ಎಂದು ಪ್ರಾಧ್ಯಾಪಕ ಕೆ. ವರಾಹಮೂರ್ತಿ ಹೇಳಿದರು.
ತಾಲೂಕಿನ ಎಚ್. ನಾಗಸಂದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ 20 ದಿನಗಳ ರಂಗ ತರಬೇತಿ ಕಾರ್ಯಾಗಾರ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಸೇನೆ ಮುಖಂಡ ಬೈಚಾಪುರ ಗಂಗಾಧರ ಮಾತನಾಡಿ, ನಾಡಿನ ಮಣ್ಣಿನ ಗುಣವನ್ನು ಒಳಗೊಂಡಿರುವ ನಾಟಕಗಳನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡಬೇಕು, ಆಧುನಿಕತೆಯ ಹೆಸರಿನಲ್ಲಿ ನಗರ ಸಂಸ್ಕೃತಿಯನ್ನು ಬಿಂಬಿಸುವ ನಾಟಕಗಳನ್ನು ಪರಿಚಯಿಸಬಾರದು. ದೇಶಿಯ ಸಂಗೀತ, ಜನಪದ ಕಲೆಗಳನ್ನು ಪರಿಚಯಿಸಿ ಅವುಗಳ ಉಳಿವಿಗೆ ಶ್ರಮಿಸಬೇಕೆಂದುದರು.
ಶಾಲೆಯ ಮುಖ್ಯ ಶಿಕ್ಷಕ ವೆಂಕಟರಾಮ್ ಪಾಲ್ಗೊಂಡಿದ್ದರು, ಶಾಲಾ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಅಭ್ಯಾಸ ಮಾಡಿದ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶಿಸಲಾಯಿತು. ನಾಟಕ ತರಬೇತಿ ಶಿಕ್ಷಕ ಆನಂದ್ ಸ್ವಾಗತಿಸಿದರು. ಸಹ ಶಿಕ್ಷಕ ಸಿ. ಮಂಜುನಾಥ್ ನಿರೂಪಿಸಿದರು. ಇಡಗೂರು ಪ್ರಸನ್ನ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement