ರಕ್ತದಾನದಿಂದ ದೇಹಶುದ್ಧಿ'
ಕೆಜಿಎಫ್: ರಸ್ತೆ ಅಪಘಾತಗಳು ಹಾಗೂ ಇನ್ನಿತರ ಅಪಘಾತಗಳಲ್ಲಿ ತೀವ್ರ ಗಾಯಗೊಂಡವರ ಜೀವ ಉಳಿಸಲು ಪ್ರತಿ ನಾಗರಿಕರು ರಕ್ತದಾನ ಮಾಡುವುದರ ಮೂಲಕ ಮಾನವಿಯತೆ ಕಾಪಾಡಿಕೊಳ್ಳಬೇಕು ಎಂದು ವಿಎಚ್ಪಿ ಮುಖಂಡ ಸುಬ್ರಮಣಿ ಪಂಡಿತ್ ಹೇಳಿದರು.
ಕೋರಮಂಡಲ್ ಸಮೀಪದ ಸ್ಕೂಲ್ ಆಫ್ ಮೈನ್ಸ್ ತಾಂತ್ರಿಕ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ದಾನದಲ್ಲಿ ಶ್ರೇಷ್ಠ ದಾನವೆಂದರೆ ಅದು ರಕ್ತದಾನ. ತಿಂಗಳಿಗೆ 2 ಬಾರಿ ರಕ್ತ ದಾನ ಮಾಡುವುದರಿಂದ ದೇಹದಲ್ಲಿ ರಕ್ತ ಶುದ್ಧೀಕರಣಗೊಳ್ಳುವುದಲ್ಲದೆ ಆರೋಗ್ಯ ಉತ್ತಮವಾಗಿರುತ್ತದೆ ಎಂದರು. ತಾಂತ್ರಿಕ ವಿದ್ಯಾ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಸುಮಾರು 50 ಯೂನಿಟ್ ರಕ್ತದಾನ ಮಾಡಿದರು. ಶಿಬಿರದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ದಾದಿಯರು, ಸಿಬ್ಬಂದಿ ಮತ್ತು ವಿಶ್ವ ಹಿಂದು ಪರಿಷತ್ನ ಮುಖಂಡರಾದ ಶ್ರೀಧರ್ರಾಜ್ ಸಿಂಧೆ, ಗಣೇಶ್, ರಾಮಕೃಷ್ಣ ಇದ್ದರು.