ಅಕ್ರಮ ಮದ್ಯ ಮಾರಾಟ; ದಾಳಿ
ಮುಳಬಾಗಲು: ತಾಲೂಕಿನ ಕೊಲದೇವಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮೂರು ಅಂಗಡಿಗಳ ಮೇಲೆ ಮುಳಬಾಗಲು ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
75ಕ್ಕೂ ಹೆಚ್ಚಿನ ವಿವಿಧ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಗ್ರಾಮದ ಹರೀಶ್, ನಟರಾಜ್, ರಾಮಪ್ಪ ಬಂಧಿತರು. ಇತ್ತೀಚೆಗೆ ಗ್ರಾಮದಲ್ಲಿ ನಡೆದ ಕಾನೂನು ಅರಿವು ಶಿಬಿರದಲ್ಲಿ ಮಹಿಳೆಯರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಕ್ರಮಕ್ಕೆ ನ್ಯಾಯಾಧೀಶರು ಡಿವೈಎಸ್ಪಿ ಸಿದ್ದಪ್ಪನವರಿಗೆ ಸೂಚನೆ ನೀಡಿದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ದಾಳಿ ನಡೆದಿದೆ.