ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಉಪಲೋಕಾಯುಕ್ತರ ಭೇಟಿ

Rashmi Kasaragodu
Updated On : 9 Oct 2013, 12:46 pm

ಮಾಲೂರು: ರಾಜ್ಯ ಉಪಲೋಕಾಯುಕ್ತರು ಸಾರ್ವಜನಿಕರ ದೂರಿನ ಮೇರೆಗೆ ಪಟ್ಟಣಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಹಲಾವರು ಸಂಘ-ಸಂಸ್ಥೆಗಳು, ಸಾರ್ವಜನಿಕರು ದೂರುಗಳ ಸುರಿಮಳೆ ಗೈದರು.
ತಾಲೂಕಿನ ಬ್ಯಾಲಹಳ್ಳಿಗೆ ಭೇಟಿ ನೀಡಿದಾಗ ಗ್ರಾಮಕ್ಕೆ ಹೂಂದಿಕೊಡಂತೆ ಇರುವ ಖಾಸಗಿ ಕಾರ್ಖಾನೆಯ ತ್ಯಾಜ್ಯ ಗ್ರಾಮಕ್ಕೆ ಹರಿದುಬರುತ್ತಿದ್ದು, ಕೆಟ್ಟ ವಾಸನೆ ಹಾಗೂ ವಿಷಯುಕ್ತ ನೀರಿನಿಂದ ಪರಿಸರ ಕಲುಷಿತಗೊಳ್ಳುತ್ತಿದೆ ಎಂದು ಗ್ರಾಮಸ್ಥರು ನೀಡಿದ ದೂರಿನ ಅನ್ವಯ ಕಾರ್ಖಾನೆಗೆ ನೀಡಿರುವ ಪರವಾನಿಗಿ ಪರಿಶೀಲಿಸುವಂತೆ ಆದೇಶಿಸಿದರಲ್ಲದೆ ಹಳ್ಳಿಯಲ್ಲಿ ಹಾದುಹೋಗುತ್ತಿರುವ ರಾಜ ಕಾಲುವೆ ದುರಸ್ತಿ ಪಡಿಸುವಂತೆ ಜಿಪಂಗೆ ಆದೇಶಿಸಿದರು. ಲಕ್ಕೂರು ಹೋಬಳಿಯ ಚೌಡದೇನಹಳ್ಳಿಯಲ್ಲಿ ರಾಜಸ್ವ ನಿರೀಕ್ಷಕ ಕೆ.ಆರ್. ಶಂಕರ್ ನಾರಾಯಣ್ ಶೆಟ್ಟಿ  ಖಾಸಗಿ ವ್ಯಕ್ತಿಗಳೂಡನೆ ಷಮೀಲ್ ಆಗಿ ಗ್ರಾಮದ ರಾಜಕಾಲುವೆ ಸುಳ್ಳು ದಾಖಲೆ ಸೃಷ್ಟಿಸಿ ನುಂಗು ಹಾಕಿದ್ದಾರೆ ಎಂಬ ದೂರಿಗೆ ಸ್ಪಂದಿಸಿದ ಉಪಲೋಕಾಯುಕ್ತರು ಬುಧವಾರ ಕೋಲಾರದಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement