ಕೈವಾರದಲ್ಲಿ ಹರಿಕಥೆ
ಚಿಂತಾಮಣಿ: ತಾಲೂಕಿನ ಶ್ರೀ ಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಮಠದ ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ಕುಪ್ಪಂನ ವಿದ್ವಾನ್ ಸೀತಾರಾಮಯ್ಯ ಅವರಿಂದ ಹರಿಕಥೆಯನ್ನು ಏರ್ಪಡಿಸಲಾಗಿತ್ತು. ಇವರಿಗೆ ಪಕ್ಕವಾದ್ಯದಲ್ಲಿ ಎ.ವಿ. ವಿಶ್ವನಾಥ್ ಹಾರ್ಮೋನಿಯಂ, ಎ.ವಿ. ಶ್ರೀಹರಿ ಪಿಟೀಲು, ಜಿ. ವೆಂಕಟರವಣಪ್ಪ ಮೃದಂಗ, ಚಿಕ್ಕವೆಂಕಟರಮಣಪ್ಪ ತಬಲ ಸಹಕಾರವನ್ನು ನೀಡಿದರು. ನಾದಸುಧಾರಸ ವೇದಿಕೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ 11 ರಿಂದ ಸಂಜೆ 7 ರವರೆಗೆ ಕನಕದಾಸರ, ಪುರಂದರದಾಸರ ಮತ್ತು ಕೈವಾರ ತಾತಯ್ಯನವರ ಕೀರ್ತನೆಗಳ ಗಾಯನ ನಿರಂತರವಾಗಿ ನಡೆಯುತ್ತಿರುತ್ತದೆ.
ಪೂರ್ವಭಾವಿ ಸಭೆ ಮುಂದೂಡಿಕೆ
ಶ್ರೀನಿವಾಸಪುರ: ವಾಲ್ಮೀಕಿ ಜಯಂತಿ ಆಚರಣೆ ಪೂರ್ವಭಾವಿ ಸಭೆಗೆ ವಾಲ್ಮೀಕಿ ಸಮುದಾಯದವರನ್ನು ಆಹ್ವಾನಿಸದೆ ನಿರ್ಲಕ್ಷ್ಯ ತೋರಿರುವ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಕರ ವಿರುದ್ಧ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿದೆ.
18 ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯವರೇ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರಿಗೆ 8 ರಂದು ಬೆಳಿಗ್ಗೆ 11ಗಂಟೆಗೆ ಪೂರ್ವಭಾವಿ ಸಭೆ ಇದೆ ಎಂದು ತಿಳಿಸಬೇಕಿತ್ತು, ಆದರೆ ವಿಷಯ ತಿಳಿಸದೆ ಸಭೆ ನಡೆಸಲು ಪ್ರಯತ್ನಿಸಿದಾಗ ವಾಲ್ಮೀಕಿ ಜನಾಂಗದವರು ಸರಿಯಾದ ಮಾಹಿತಿ ಇಲ್ಲದೆ ಪೂರ್ವಭಾವಿ ಸಭೆಗೆ ಬರದೆ ಇದ್ದ ಕಾರಣ ತಹಸೀಲ್ದಾರ್ ಎಚ್. ಜಯರವರು ವಿವರಗಳನ್ನು ಸಂಗ್ರಹಿಸಿದಾಗ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕರ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದು ಬಂದಾಗ ವ್ಯವಸ್ಥಾಪಕ ದೊಡ್ಡಕದಿರಯ್ಯರನ್ನು ತರಾಟೆಗೆ ತೆಗೆದುಕೊಂಡರು. ಪೂರ್ವಭಾವಿ ಸಭೆಯನ್ನು ಎಲ್ಲ ಮುಖಂಡರ ಸಮ್ಮುಖದಲ್ಲಿ 12 ರಂದು 11 ಗಂಟೆಗೆ ನಡೆಯುವಂತೆ ಸಭೆಯಲ್ಲಿ ತಿರ್ಮಾನಿಸಿ ನಿರ್ಮಯವನ್ನು ತೆಗದುಕೊಳ್ಳಲಾಯಿತು.