ನೂತನ ರೋಟರಿ ಭವನ ಉದ್ಘಾಟನೆ
ಮುಳಬಾಗಲು: ರೋಟರಿ ಭವನವನ್ನು ಕೇವಲ ಆರು ತಿಂಗಳಲ್ಲಿ ನಿರ್ಮಿಸಿ ಜಿಲ್ಲೆಯ ರೋಟರಿ ಇತಿಹಾಸದಲ್ಲಿ ಮುಳಬಾಗಲು ರೋಟರಿ ದಾಖಲೆ ಮಾಡಿದೆ ಎಂದು ಜಿಲ್ಲಾ ಗವರ್ನರ್ ಕೆ.ಎಸ್. ನಾಗೇಂದ್ರ ಹೇಳಿದರು.
ಪಟ್ಟಣದ ಸತ್ಯನಾರಯಣಸ್ವಾಮಿ ದೇವಾಲಯದ ಬಳಿ ನಿರ್ಮಿಸುತ್ತಿರುವ ರೋಟರಿ ಮುಳಬಾಗಲು ಭವನ ಉದ್ಫಾಟಿಸಿ ಮಾತನಾಡಿದ ಅವರು, ರೋಟರಿ ಸದಸ್ಯರು ಸಮಾಜ ಮುಖಿಯಾಗಿ ಕೆಲಸ ಮಾಡಲು ಮುಂದಾಗಬೇಕು ಎಂದರು. ನೂತನ ಕಟ್ಟಡದಲ್ಲಿ ವಾರಕ್ಕೆ ಎರಡು ಬಾರಿ ಉಚಿತ ನೇತ್ರ ಚಿಕಿತ್ಸೆ ಹಮ್ಮಿಕೊಳ್ಳಲಾಗುವುದು ಎಂದು ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಹೇಳಿದರು. ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ರಾಘವೇಂದ್ರ ಬಾಲಾಜಿ, ಭದ್ರಪ್ರಸಾದ್, ಮುಳಬಾಗಲು ರೋಟರಿ ಅಧ್ಯಕ್ಷ ವಿ.ಆರ್.ಪ್ರಭಾಕರಗುಪ್ತ, ಕಾರ್ಯದರ್ಶಿ ರಮೇಶ್, ರವೀಂದ್ರ ಪ್ರಸಾದ್, ಅಲಂಗೂರು ಶಿವಣ್ಣ, ಬಿ.ಕೆ. ವೆಂಕಟನಾರಾಯಣ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್. ವೆಂಕಟಾಟಲಪತಿ ಭಾಗವಹಿಸಿದ್ದರು.