ಮಾಜಿ ಶಾಸಕರಿಗೆ ಹಾಲಿ ಶಾಸಕರ ತಿರುಗೇಟು
ಬಂಗಾರಪೇಟೆ: ಕ್ಷೇತ್ರದ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ನಿಜವಾಗಿಯೇ ಕ್ಷೇತ್ರ ಅಭಿವೃದ್ಧಿಗೆ ಒತ್ತುಕೊಟ್ಟಿದ್ದರೆ ಚುನಾವಣೆಯಲ್ಲಿ ಜನರಿಂದ ಯಾವ ಕಾರಣಕ್ಕೆ ತಿರಸ್ಕರಿಸಿದರು. ಅವರು ಅಧಿಕಾರ ಅವಧಿಯಲ್ಲಿ ಮೈಮರೆತು ಇದ್ದರಿಂದ ಜನರು ಪರಾಭವಗೊಳಿಸಿದ್ದಾರೆ ಮತ್ತು ನಾನು ಉತ್ತಮ ಆಡಳಿತ ನೀಡುತ್ತಿರುವುದರಿಂದ ಸಹಿಸಲಾಗದೆ ವ್ಯರ್ಥ ಆರೋಪಗಳಲ್ಲಿ ತೊಡಗಿದ್ದಾರೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾಜಿ ಶಾಸಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಸೋಮವಾರ ಕೋಲಾರದಲ್ಲಿ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಲ್ಲದೆ ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ನಾನು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಹಿಂದಿನ ಅವರ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳಿಗೆ ಹೊಸ ನಾಮಫಲಕವನ್ನು ಹಾಕಿಕೊಂಡು ಬಿಟ್ಟಿ ಪ್ರಚಾರ ಕೈಗೊಂಡಿದ್ದಾರೆ ಎಂದು ಆರೋಪಿಸಿರುವುದರ ಹಿಂದೆ ರಾಜಕೀಯ ಕೈವಾಡವಿದೆ.ಅಲ್ಲದೆ ಅವರು ಮುಂದಿನ ಲೋಕಸಭೆ ಚುನಾವಣೆ ಮೇಲೆ ಕಣ್ಣಾಕಿರುವುದರಿಂದ ಮತದಾರರನ್ನು ಸೆಳೆಯಲು ಸುಳ್ಳು ಅಪಪ್ರಚಾರದಲ್ಲಿ ತೊಡಗಿ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ ಇವರ ಆಸೆ ಎಂದಿಗೂ ಕೈಗೂಡುವುದಿಲ್ಲ ಎಂದು ಕನ್ನಡಪ್ರಭಕ್ಕೆ ತಿಳಿಸಿದರು. ಮಾಜಿ ಶಾಸಕರ ಅವಧಿಯಲ್ಲಿ ಹಲವು ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದ್ದರೆ ಏಕೆ ಅವರ ಅವಧಿಯಲ್ಲೇ ಪೂರ್ಣಗೊಳಿಸಿಲ್ಲ ಎಂದು ಪ್ರಶ್ನಿಸಿದ ಶಾಸಕರು ಅವರ ಅವಧಿಯಲ್ಲಿ ಮಂಜೂರಾತಿ ದೊರೆತಿದ್ದರೂ ಹಣ ಕಾಸಿನ ತೊಂದರೆಯಿಂದ ನೆನೆಗುದಿಗೆ ಬಿದ್ದಿತ್ತು. ನಾನು ಶಾಸಕರಾದ ಬಳಿಕ ಅವುಗಳಿಗೆ ಅನುದಾನವನ್ನು ಮಂಜೂರಾತಿ ಮಾಡಿಸಿಕೊಂಡು ಮುಂದುವರೆಸಿರುವ ಇದು ಸಾಧನೆ ಅಲ್ಲದೆ ಬೇರೇನುಯರಗೇಳ್ ಯೋಜನೆಗೆ ಬೇಕಾದ ಅರಣ್ಯ ಭೂಮಿ ಹಾಗೂ ರೈತರ ಜಮೀನುಗಳನ್ನು ವಶಪಡಿಸಿಕೊಂಡು ಕಾಮಗಾರಿ ಪ್ರಾರಂಭಕ್ಕೆ ಚಾಲನೆ ನೀಡಲಾಗಿದೆ ಇದು ಏಕೆ ಅವರು ಮಾಡಲಿಲ್ಲ. ಅಲ್ಲದೆ ಸಿಎಂ ಸಿದ್ದರಾಮಯ್ಯ ಸರ್ಕಾರ ಹಲವು ಜನಪ ಯೋಜನೆಗಳನ್ನು ಜಾರಿಗೆ ತಂದು ಜನಪ್ರಿಯವಾಗಿರುವುದರಿಂದ ಹಾಗೂ ಕ್ಷೇತ್ರದಲ್ಲಿ ನಾನು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿರುವುದರಿಂದ ಆತಂಕಗೊಂಡಿರುವ ಮಾಜಿ ಶಾಸಕರು ಮುಂದೆ ಕ್ಷೇತ್ರದಲ್ಲಿ ಎಲ್ಲಿ ನಮಗೆ ನೆಲೆ ದೊರೆಯದೆ ಹೋಗುವುದೋ ಎಂಬ ಬೀತಿಯಿಂದ ಜನರನ್ನು ದಾರಿ ತಪ್ಪಿಸಲು ಕುತಂತ್ರ ರಾಜಕೀಯದಲ್ಲಿ ತೊಡಗಿದ್ದಾರೆ ಮತದಾರರು ಬುದ್ಧಿವಂತರಾಗಿದ್ದು ಅವರನ್ನು ಯಾಮಾರಿಸಲು ಸಾಧ್ಯವಿಲ್ಲ ಎಂದು ಇನ್ನಾದರು ಇಂತಹ ಕೀಳು ಮಟ್ಟದ ಆರೋಪಗಳನ್ನು ಮಾಜಿ ಶಾಸಕರು ಬಿಡಲಿ ಎಂದು ಸಲಹೆ ನೀಡಿದ್ದಾರೆ.