ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮೂಲ ಸೌಕರ್ಯಗಳ ಕೊರತೆ; ತರಾಟೆ

Rashmi Kasaragodu
Updated On : 9 Oct 2013, 12:47 pm

ಮಾಲೂರು: ಆಟವಾಡುವ ಮಕ್ಕಳನ್ನು ಮೂಲ ಸೌಕರ್ಯವಿಲ್ಲದ ಕೋಣೆಯಲ್ಲಿ ಕೊಡಿ ಹಾಕಿ ಪೌಷ್ಠಿಕಾಂಶವಿಲ್ಲದ ಊಟ ನೀಡುತ್ತಿರುವುದಕ್ಕೆ ಉಪಲೋಕಾಯುಕ್ತ ಸುಭಾಷ್ ಬಿ.ಆದಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ನಡೆಯಿತು.
ಮಕ್ಕಳ ಹಾಗೂ ಮಹಿಳೆ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಸಕಿ ಶಂಕುತಲಮ್ಮ ಉಪಲೋಕಾಯುಕ್ತರ ಪ್ರಶ್ನೆಗೆ ತಡಬಡಾಯಿಸಿದ ಘಟನೆ ಬಿಸಿಯೂಟದಲ್ಲಿ ಬಿದ್ದು ಇತ್ತೀಚಿಗೆ ಸಾವನ್ನಪ್ಪಿದ ತಾಲೂಕಿನ ಬ್ಯಾಲಹಳ್ಳಿಗೆ ಭೇಟಿ ನೀಡಿದಾಗ ನಡೆದಿದೆ.
ಸಾರ್ವಜನಿಕರ ಹಲಾವರು ದೂರಿನ ಮೇಲೆ ಮಂಗಳವಾರ ಬ್ಯಾಲಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದಾಗ ಪರಿಸ್ಥಿತಿಯನ್ನು ಕಂಡ ಉಪ ಲೋಕಾಯಕ್ತರು ಸ್ಥಳದಲ್ಲಿದ್ದ ಜಿಲ್ಲಾ ಉಪನಿರ್ದೇಶಕಿ ಶಂಕುತಲರನ್ನು ತರಾಟೆ ತೆಗೆದುಕೊಂಡರು. ಇದೇ ಸಂಧರ್ಭದಲ್ಲಿ ಸಂಬಂಧ ವಿಲ್ಲದ ಮಕ್ಕಳನ್ನು ಕೇಂದ್ರದಲ್ಲಿ ಕುಳಿಸಿಕೊಂಡು ಹಾಜರಾತಿ ತೋರಿಸಿದ್ದ ಅಂಗನವಾಡಿ ಶಿಕ್ಷಕಿಯನ್ನು ತರಾಟೆ ತೆಗೆದುಕೊಂಡ ಉಪಲೋಕಾಯುಕ್ತರು ಹೆಚ್ಚಿನ ಹಣ ಬಿಡುಗಡೆಗಾಗಿ ಈ ರೀತಿಯ ಸುಳ್ಳು ಹಾಜರಾತಿ ತೋರಿಸುತ್ತಿರುವುದು ಸರಿಯಲ್ಲ. ಈಬಗ್ಗೆ ವರದಿ ನೀಡುವಂತೆ ಇಲಾಖೆಯ ಉಪನಿರ್ದೇಶಕಿಗೆ ಆದೇಶಿಸಿದರು. ಶಾಲೆಯ ಅವರಣದಲ್ಲಿರುವ ಅಡುಗೆ ಮನೆಯನ್ನು ಪರಿಶೀಲಿಸಿದ ಉಪಲೋಕಾಯುಕ್ತರು ಅಡುಗೆ ಹಾಗೂ ಕುಡಿಯುವುದಕ್ಕಾಗಿ ಕೊಳವೆ ಬಾವಿ ನೀರನ್ನು ಬಳಸುತ್ತಿರುವುದನ್ನು ಅಕ್ಷೇಪಿಸಿ ತಕ್ಷಣ ಗುಣಮಟ್ಟದ ನೀರು ಪೊರೈಸುವಂತೆ ಎಇಇ ಹಾಗೂ ಜಿಪಂಗೆ ಆದೇಶಿಸಿದರು. ಮಗುವಿನ ಸಾವಿಗೆ ಸಂಬಂಧ ಪಟ್ಟ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ ಉಪಲೋಕಾಯುಕ್ತರು ಮಗುವನ್ನು ಕಳೆದುಕೊಂಡ ಮಂಜಳಾ-ಅಂಬರೀಷ್ ದಂಪತಿಗಳಿಗೆ ಸ್ವಾಂತನ ಹೇಳಿದರು.
ಸಿಇಒ ಜುಲ್ಫೀಕರ್ ವುಲ್ಲಾ, ಸಹಾಯಕ ಜಿಲ್ಲಾಧಿಕಾರಿ ವಿಜಯ ಕುಮಾರ್,ಅಂಗವಾಡಿ ಇಲಾಖೆಯ ಉಪನಿರ್ದೇಶಕಿ ಶಕುಂತಲ,ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ರಾಮನಿವಾಸ್ ಸಪಾಟ್, ಲೋಕಾಯುಕ್ತ ಡಿವೈಎಸ್‌ಪಿ ನಾಗರಾಜ್, ಇನ್ಸ್‌ಪೆಕ್ಟರ್ ಅಶ್ವಥ್‌ನಾರಾಯಣ್, ಲೋಕಯುಕ್ತ ನ್ಯಾಯಧೀಶ ನೇಗಿ, ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ ಲೀಲಾವತಿ, ತಹಸೀಲ್ದಾರ್ ಡಾ. ಸುಧಾ, ಎ.ಇ.ಇ. ಬದ್ರಿನಾಥ್, ಲೋಕಪಯೋಗಿ ಎಇಇ ಬಸವರಾಜು, ಜಿಲ್ಲಾ ವಾರ್ತಧಿಕಾರಿ ರಂಗಾರೆಡ್ಡಿ, ಮುಖ್ಯಾಧಿಕಾರಿ ರೇಣುಕಾ, ವೈದ್ಯಾಧಿಕಾರಿ ಡಾ.ಶ್ರೀನಿವಾಸ್‌ಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement