ರಾಜ್ಯ ಮಟ್ಟಕ್ಕೆ ಆಯ್ಕೆ
ಗುಡಿಬಂಡೆ: ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯ ಜೆ.ಸಿ. ಸಂಜನ (ಗುಂಡು ಎಸೆತ), ಅರವಿಂದ ಶಾಲೆಯ ಜಿ.ಕೆ. ಮುರಳಿ (ಗುಂಡು ಎಸೆತ), ಮಂಜುನಾಥ (ಭರ್ಚಿ ಎಸೆತ), ಕೆಜಿಬಿವಿ ಶಾಲೆಯ ಲತಾ (ಎತ್ತರ ಜಿಗಿತ), ಶಿವಮ್ಮ (ಚಕ್ರ ಎಸೆತ) ಎಂಬ ವಿದ್ಯಾರ್ಥಿಗಳು ಇತ್ತೀಚೆಗೆ ಚಿಕ್ಕಬಳ್ಳಾಪುರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ವಿವಿಧ ಗಣ್ಯರು ಶುಭ ಹಾರೈಸಿದ್ದಾರೆ.