ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಶಿಕ್ಷಣದಿಂದ ಪ್ರತಿಯೊಂದು ಸಮುದಾಯದ ಅಭಿವೃದ್ಧಿ ಸಾಧ್ಯ'

Rashmi Kasaragodu
Updated On : 9 Oct 2013, 12:43 pm

ಮಾಲೂರು: ವಿದ್ಯೆಯಿಂದ ಯಾವುದೇ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ವಕೀಲರ ಸಂಘದ ಅಧ್ಯಕ್ಷ ಆರ್.ಸಿ. ಅಪ್ಪಾಜಿಗೌಡ ಹೇಳಿದರು.
ಪಟ್ಟಣದ ಶ್ರೀ ಕೋದಂಡರಾಮ ದೇವಾಲಯದಲ್ಲಿ ತಾಲೂಕು ಗಾಣಿಗ ಸಂಘ ಆಯೋಜಿಸಿದ್ದ ಶರನ್ನವರಾತ್ರಿ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ನೋಟ್ ಪುಸ್ತಕ-ಲೇಖನಿ ಸಾಮಗ್ರಿಗಳ ವಿತರಿಸಿ ಮಾತನಾಡಿ, ಗಾಣಿಕ ಸಮಾಜ ಅನಾದಿಕಾಲದಿಂದಲೂ ಗಾಣದಿಂದ ಎಣ್ಣೆ ತೈಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಜನಾಂಗ ಅರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದರು. ಪಶು ವೈದ್ಯೆ ಡಾ. ಅನುರಾಧ ಮಾತನಾಡಿ, ಗಾಣಿಗ ಸಮಾಜ ಹಿಂದುಳಿಂದ ವರ್ಗಗಳ 2 ಎ ಗುಂಪಿಗೆ ಸೇರಿದ್ದು, ಮೀಸಲಾತಿಯಡಿ ಉನ್ನತ್ತ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿ ಸಮಾಜದ ವಿವಿಧ ಕ್ಷೇತ್ರದಳಲ್ಲಿ ಸೇವೆ ಸಲ್ಲಿಸುವಂತಾಗಬೇಕು ಎಂದರು. ನಿವೃತ್ತ ಶಿಕ್ಷಕ ವೆಂಕಟೇಶಪ್ಪ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನಿ ಸಾಮಾಗ್ರಿಗಳನ್ನು ವಿತರಿಸದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಇದೇ ಸಂಧರ್ಭದಲ್ಲಿ ಪ್ರತಿಭಾ ಪುರಸ್ಕರ ಮಾಡಲಾಯಿತು. ಪುರಸಭೆ ಮಾಜಿ ಸದಸ್ಯ ಎಂ.ಆರ್. ವೆಂಕಟಪ್ಪ, ಪೊಲೀಸ್ ಇಲಾಖೆಯ ಮುನಿನಾರಾಯಣ್, ವಿ.ಎನ್. ಮೂರ್ತಿ, ಮುನಿಶಂಕರ್, ಎಂ.ಆರ್. ಶ್ಯಾಮಣ್ಣ, ಮುವೆಂಕಟಪ್ಪ, ಎಸ್.ನಾರಾಯಣಸ್ವಾಮಿ, ವೆಂಕಟೇಶಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement