ಸಾವಿರಾರು ಕೋಳಿ ಮರಿಗಳ ಸಾವು
ಕೋಲಾರ: ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಶ್ರೀನಿವಾಸಪುರ ತಾಲೂಕಿನ ಅರಿನಾಗನಹಳ್ಳಿ ಗ್ರಾಮದ ಆರ್. ಗೋಪಾಲಪ್ಪ ಎಂಬುವರ ಕೋಳಿ ಫಾರಂಗೆ ನೀರು ನುಗ್ಗಿ 9 ಸಾವಿರ ಕೋಳಿ ಮರಿಗಳು ಸತ್ತು ಹೋಗಿರುವ ಘಟನೆ ನಡೆದಿದ್ದು ಸುಮಾರು 3 ಲಕ್ಷ ರು. ಉಂಟಾಗಿದೆ.
ಶೆಡ್ಗಳನ್ನು ನಿರ್ಮಿಸಿಕೊಂಡು ಕೋಳಿ ಸಾಕಾಣಿಕೆ ಮಾಡಿ ಜೀವನ ಸಾಗಿಸಲಾಗುತ್ತಿತ್ತು. ಕೋಳಿ ಫಾರಂ ಮಾಡಲು ಸಾಲ ಮಾಡಿ ಮರಿಗಳನ್ನು ಖರೀದಿಸಿದ್ದು ಈಗ ನಷ್ಟವಾಗಿರುವುದರಿಂದ ಕುಟುಂಬ ನಿರ್ವಹಣೆ ಮಾಡಲು ತೊಂದರೆ ಆಗಿರುವುದರಿಂದ ಪರಿಹಾರ ಕಲ್ಪಿಸುವಂತೆ ಪಾರಂನ ಮಾಲೀಕ ಆರ್. ಗೋಪಾಲಪ್ಪ ಜಿಲ್ಲಾ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.