'ಹಣದುಬ್ಬರ ತಡೆಯದ ಕೇಂದ್ರ ಸರ್ಕಾರ'
ಕೆಜಿಎಫ್: ಕೇಂದ್ರ ಸರ್ಕಾರ ಚಿನ್ನ ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಿದೆ ಹಾಗೂ ಚಿನ್ನದ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಿದರೂ ಕೇಂದ್ರ ಸರ್ಕಾರದಿಂದ ಹಣದುಬ್ಬರ ಕಡಿಮೆಗೊಳಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಜ್ಯುವಲೆರಿ ಫೆಡರೇಷನ್ ಅಧ್ಯಕ್ಷ ಜಯಾಚಾರ್ಯ ಮಾತನಾಡಿದರು. ಕೆಜಿಎಫ್ ಚಿನ್ನ ಮತ್ತು ಗಿರವಿ ವರ್ತಕರ ಸಂಘದ ವತಿಯಿಂದ ನಗರದ ಹೆಚ್.ಜಿ.ಆರ್ ರೆಸಾರ್ಟ್ನಲ್ಲಿ ಆಯೋಜಿಸಿದ್ದ 2ನೇ ತ್ರೈಮಾಸಿಕ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅದೇ ರೀತಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಚಿನ್ನದ ಬೆಲೆಯನ್ನು ಏಕರೂಪವಾಗಿರಬೇಕು ಅಂದರೆ ಮೊದಲು ರಾಜ್ಯದಲ್ಲಿರುವ ಎಲ್ಲಾ ಚಿನ್ನ ಹಾಗೂ ಬೆಳ್ಳಿ ವರ್ತಕರು ಕರ್ನಾಟಕ ರಾಜ್ಯ ಜ್ಯುವಲೆರಿ ಫೆಡರೇಶ್ನಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಪೋರೇಟ್ ವಲಯವು ಚಿನ್ನ ವ್ಯಾಪಾರದಲ್ಲಿ ತೊಡಗಿರುವುದರಿಂದ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವುಂಟು ಮಾಡುತ್ತಿದೆ ಮತ್ತು ಜಾಗತಿಕ ಮಟ್ಟದಲ್ಲಿ ತೀವ್ರ ಪೈಪೋಟಿ ಸಹ ಇರುವುದರಿಂದ ತಾವುಗಳು ಒಗ್ಗೂಡಿ ಬೆಂಬಲ ಸೂಚಿಸಬೇಕು ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಡಾ.ಬಿ. ರಾಮಾಚಾರಿ, ಕೆಜಿಎಫ್ ಚಿನ್ನದ ವರ್ತಕರ ಸಂಘದ ಅಶೋಕ್ಬಾಪ್ನ, ಕಾರ್ಯದರ್ಶಿ ಸುದರ್ಶನ್ಬೋರಾ, ಮಾಜಿ ಅಧ್ಯಕ್ಷರಾದ ಮಂಗಲ್ಚಂದ್ಜೀ, ಧರ್ಮಿಚಂದ್ಜೀ, ರಾಜಶೇಖರ್, ವೆಂಕಟೇಶ್ಬಾಬು, ಪ್ರೇಮ್ಚಂದ್ ಚಲ್ಲಾನಿ ಮತ್ತಿತರರು ಹಾಜರಿದ್ದರು.