ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಹೊಸಗನ್ನಡ ಸಾಹಿತ್ಯಕ್ಕೆ ಕುವೆಂಪು ಮಹತ್ವದ ಜಾಗ ಕಲ್ಪಿಸಿದ್ದಾರೆ'

Rashmi Kasaragodu
Updated On : 9 Oct 2013, 12:48 pm

ಕೋಲಾರ: ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯದ ವೈಚಾರಿಕ ನಿಲುವುಗಳನ್ನು ಮರುಕಟ್ಟಿಕೊಂಡು ಆ ಮೂಲಕ ಭಾರತದ ಪ್ರಾದೇಶಿಕ ನುಡಿಗಳಲ್ಲಿಯೇ ಹೊಸಗನ್ನಡ ಸಾಹಿತ್ಯಕ್ಕೆ ಒಂದು ಮಹತ್ವದ ಜಾಗ ಕಲ್ಪಿಸಿದ್ದಾರೆಂದು ಬೆಂಗಳೂರು ನ್ಯಾಷನಲ್ ಕಾಲೇಜಿನ ಉಪನ್ಯಾಸಕ ಡಾ. ರಂಗನಾಥ್ ಕಂಠನಕುಂಟೆ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಸ್ಮಾರಕ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕುವೆಂಪು ಓದು ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಶೂದ್ರ ತಪಸ್ವಿ, ಜಲಗಾರ, ಸ್ಮಶಾನ, ಕುರುಕ್ಷೇತ್ರಂ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಸೇರಿದಂತೆ ಕುವೆಂಪುರವರ ಗದ್ಯ ಬರಹಗಳಲ್ಲಿ ವೈಚಾರಿಕತೆಯ ಹೊಸ ಆಯಾಮಗಳನ್ನು ಇವೆ. ಇದರಿಂದಾಗಿ ಭಾರತದ ಪ್ರಾದೇಶಿಕ ನುಡಿಗಳಲ್ಲಿಯೇ ಹೊಸಗನ್ನಡಕ್ಕೆ ಮೆರುಗು ಬಂದಿದೆ ಎಂದರು.
ಕುವೆಂಪು ಅವರಲ್ಲಿದ್ದ ಸಾಮಾಜಿಕ ಕಾಳಜಿ, ಸಾಂಸ್ಕೃತಿಕ ಬದ್ಧತೆ, ರಾಜಕೀಯ ನಿಲುವು, ಚಾರಿತ್ರಿಕ ಅರಿವು ಹಾಗೂ ಒಟ್ಟು ಸಾಂಸ್ಕೃತಿಕ ನಂಬಿಕೆಯಿಂದಾಗಿ ಕುವೆಂಪು ಓದು ಮಾಲಿಕೆ, ಇಂತಹ ಕಾರ್ಯಕ್ರಮಗಳಿಂದ ನಮಗೆಲ್ಲ ಸಾಂಸ್ಕೃತಿಯ ಚಿಂತನೆಯ ದಾರಿಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಜ್ಯದ ಈ ಹೊತ್ತಿನ ಸಾಂಸ್ಕೃತಿಕ ಸವಾಲುಗಳನ್ನು ಎದುರಿಸಲು ಬೇಕಾಗಿರುವ ಚಿಂತನೆಯ ಕ್ರಮಗಳನ್ನು ಕುವೆಂಪು ಅವರ ಒಟ್ಟು ಬರಹಗಳಲ್ಲಿ ಕಾಣಬಹುದಾಗಿದೆ. ಮನುಷ್ಯನಾಗುವುದಕ್ಕೆ ಮತ್ತು ಉತ್ತಮ ವ್ಯಕ್ತಿತ್ವ ಪ್ರತಿಯೊಬ್ಬರು ಕುವೆಂಪು ರೀತಿಯಲ್ಲಿ ಉತ್ತಮ ಸಾಹಿತಿಗಳು ಸಮಾಜಕ್ಕೆ ಬೇಕಾಗಿದೆ ಎಂದರು. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ವಿದ್ಯಾರ್ಥಿ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಅವರಲ್ಲಿ ವೈಚಾರಿಕ ಪ್ರಜ್ಞೆಯನ್ನು ಉದ್ದೀಪನಗೊಳಿಸಲು ಪ್ರತಿಷ್ಠಾನ ಹಲವಾರು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಮಾಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಚಂದ್ರಶೇಖರ ನಂಗಲಿ ಮಾತನಾಡಿ, ರಾಮಣ್ಣ ಪ್ರತಿನಿಧಿಸಿದ್ದು ನಂಬಿಕೆ, ಭರವಸೆ, ಅದಮ್ಯ ಜೀವನ ಪ್ರೀತಿ ಮತ್ತು ಸಮಾನತೆಯನ್ನು ಅವರ ಆದರ್ಶಗಳನ್ನು ಮುಂದುವರೆಸಲು ಸಮಾನಸಕ್ತ ಗೆಳೆಯರು ಕೂಡಿ ರಚಿಸಿದ ಸಂಸ್ಥೆ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಎಂದು ಹೇಳಿದರು.
ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್ ಎಸ್.ವಿ. ನಂದವಾಡಗಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ, ಸಾಹಿತಿ ಡಾ. ಶಿವಪ್ಪ ಇದ್ದರು. ಉಪನ್ಯಾಸಕ ಎಸ್. ರವೀಂದ್ರ ನಿರೂಪಿಸಿ. ರಮಾನಂದ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement