ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಲು ಬಾಯಿ ಜ್ವರ; ಹಸು ಸಾವು

Rashmi Kasaragodu
Updated On : 10 Oct 2013, 12:40 pm

ಟೇಕಲ್: ಕಾಲು ಬಾಯಿ ಜ್ವರಕ್ಕೆ ನೂಟವೆ ಗ್ರಾಮದ ಅಪ್ಪಯ್ಯಪ್ಪನವರಿಗೆ ಸೇರಿದ ಹಸು ಬುಧವಾರ ಸಾವನ್ನಪ್ಪಿದೆ. ರೈತ ಅಪ್ಪಯ್ಯಪ್ಪ ಹೈನೋದ್ಯಮದಲ್ಲೆ ಜೀವನ ಸಾಗಿಸುತ್ತಿದ್ದು ಇದರ ಸಾವಿನಿಂದ ಈತನ ಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಪರಿಹಾರ ನೀಡಬೇಕೆಂದು ಸ್ಥಳೀಯ ಜನತೆ ಒತ್ತಾಯಿಸಿದೆ.


ಪರಿಹಾರ ವಿತರಣೆ

ಚಿಕ್ಕಬಳ್ಳಾಪುರ: ಮಂಗಳವಾರ ಸುರಿದ ಧಾರಾಕಾರ ಮಳೆಗೆ ನಗರದ ಹಲವೆಡೆ ಮನೆಗಳು ಕುಸಿದು ನಷ್ಟ ಉಂಟಾಗಿದ್ದು ತಾಲೂಕು ಆಡಳಿತದ ವತಿಯಿಂದ ಹಾನಿಗೊಳಗಾದ ಮನೆಯ ಮಾಲೀಕರಿಗೆ ಪರಿಹಾರದ ಚೆಕ್ಕನ್ನು ವಿತರಿಸಲಾಯಿತು.
ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ಪರಿಶೀಲನೆ ನಡೆಸಿದ ಶಾಸಕ ಕೆ. ಸುಧಾಕರ್ ಮತ್ತು ತಹಸೀಲ್ದಾರ್ ನಟೇಶ್ ತ್ವರಿತ ಪರಿಹಾರದ ಚೆಕ್ಕನ್ನು ವಿತರಿಸಿದರು. ವಸತಿ ರಹಿತ ಬಡ ಜನರಿಗಾಗಿ ಸರ್ಕಾರ ಮನೆಗಳನ್ನು ಕಟ್ಟಿಸಿಕೊಡಲು ಆರ್ಥಿಕ ನೆರವನ್ನು ನೀಡುತ್ತಿದ್ದು ಜನರು ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ನಗರಸಭಾ ಸದಸ್ಯರಾದ ಶ್ರೀನಿವಾಸ್, ಗಜೇಂದ್ರ, ಮಾಜಿ ಅಧ್ಯಕ್ಷ ಶ್ರೀರಾಮ್, ಗ್ರಾಮಲೆಕ್ಕಿಗ ವಿಶ್ವನಾಥ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement