ಮತ್ತೆ ಒಡೆದ ಕಾಲುವೆ
ಮಾಲೂರು: ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಒಡೆದು ಹೋಗಿದ್ದ ದೊಡ್ಡ ಕೆರೆಯ ರಾಜಕಾಲುವೆಯನ್ನು ಶಾಸಕ ಮಂಜುನಾಥ್ ಗೌಡ ಮುಂದೆ ನಿಂತು ನಿರ್ಮಿಸಿದ್ದು, ಮಂಗಳವಾರ ರಾತ್ರಿ ಬಿದ್ದ ಮಳೆಗೆ ಮತ್ತೆ ಕಾಲುವೆ ಒಡೆದು ಬೆಳೆಗಳು ಸಂಪೂರ್ಣ ಹಾಳಾಗಿವೆ.
ಸೋಮವಾರದ ಮಳೆಯಿಂದ ಜನರಿಗೆ ತೊಂದರೆ ಆಗಿರುವುದು ತಿಳಿದ ಶಾಸಕ ಮಂಜುನಾಥ್ ಗೌಡ ರವರು ತಹಸೀಲ್ದಾರ್ ಡಾ. ಸುಧಾರವರೂಡನೆ ಸ್ಥಳಕ್ಕೆ ಧಾವಿಸಿ ತಮ್ಮ ಸ್ವಂತ ಖರ್ಚಿನಿಂದ ಕಾಲುವೆ ದುರಸ್ತಿ ಮಾಡಿಸಿದ್ದರು. ಆದರೆ ಮಂಗಳವಾರ ರಾತ್ರಿ ಮತ್ತೆ ಸುರಿದ ಭಾರಿ ಮಳೆಗೆ ಕಾಲುವೆ ಕಟ್ಟೆ ಒಡೆದು ಬೆಳೆಗಳು ಸಂಪೂರ್ಣ ಕೊಚ್ಚಿಹೋಗಿವೆ.