ಮಳೆ; ವಿದ್ಯುತ್ ಉಪಕೇಂದ್ರ ಜಲಾವೃತ
ಟೇಕಲ್: ಮಂಗಳವಾರ ರಾತ್ರಿ ಬಿದ್ದ ದಾರಾಕಾರ ಮಳೆಯಿಂದ ಟೇಕಲ್ನ ಬಹುತೇಕ ಕೆರೆ ಕುಂಟೆಗಳು ಭರ್ತಿಯಾಗಿದ್ದು, ರಸ್ತೆಗಳೆಲ್ಲಾ ನೀರಿನಿಂದ ತುಂಬಿವೆ.
ಕೆಪಿಟಿಸಿಎಲ್ನ 66 ಕೆವಿ ವಿದ್ಯುತ್ ಉಪಕೇಂದ್ರ ಭಾಗಶಃ ಜಲಾವೃತಗೊಂಡಿದ್ದು ಮಂಗಳವಾರ ರಾತ್ರಿ ಒಂದು ಗಂಟೆಗೆ ವಿದ್ಯುತ್ ಕಡಿತಗೊಂಡು ಬುಧವಾರ ಮಧ್ಯಾಹ್ನ 2 ಗಂಟೆಗೆ ನೀಡಲಾಯಿತು. ಈ ಉಪಕೇಂದ್ರದಿಂದ 95 ಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಸಂಪರ್ಕವಿದ್ದು ಒಟ್ಟು 10 ವಿದ್ಯುತ್ ಪೀಡರ್ಗಳು ಹಾಗೂ 66 ಉಪಕೇಂದ್ರಗಳು 13 ಗಂಟೆಗಳ ಕಾಲ ಸ್ಥಗಿತಗೊಂಡು ನಂತರ ಅಧಿಕಾರಿಗಳು ಸರಿಪಡಿಸಿದರು. ಪ್ರತಿ ಭಾರಿ ಮಳೆ ಬಂದಾಗ ಟೇಕಲ್ನಲ್ಲಿ ವಿದ್ಯುತ್ ಕಡಿತಗೊಳ್ಳುತ್ತಿದ್ದು ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಈ ಭಾಗದ ಜನ ದೂರಿದ್ದಾರೆ.