ವಸತಿ ರಹಿತರಿಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ
ಕೋಲಾರ: ವಸತಿ ರಹಿತರಿಗೆ ಮೂಲಸೌಕರ್ಯ ಹೊಂದಿರುವ ವಸತಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಗತ್ಯ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಹಾಗೂ ವಕೀಲ ಕೆ. ನರೇಂದ್ರಬಾಬು ಆಗ್ರಹಿಸಿದರು.
ನಗರದ ಸೆವೆಂತ್ ಡೇ ಅಡ್ವೆಂಟಿಸ್ಟ್ ಹೈಸ್ಕೂಲ್ನಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ವಸತಿ ದಿನಾಚರಣೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಇಚ್ಚಾಶಕ್ತಿ ಹಾಗೂ ವಿವಿಧ ವಸತಿ ಯೋಜನೆಗಳ ಅಸಮರ್ಪಕ ಅನುಷ್ಠಾನದ ಫಲವಾಗಿ ಇಂದಿಗೂ ರಾಜ್ಯದಲ್ಲಿ ವಸತಿ ರಹಿತರಾಗಿದ್ದಾರೆ. ಇತ್ತೀಚಿನ ಅಧ್ಯಯನದ ಪ್ರಕಾರ ಶೇ.9ರಷ್ಟು ಕುಟುಂಬಗಳು ಇಂದಿಗೂ ಗುಡಿಸಿಲುಗಳಲ್ಲಿ ಇತರೆ ಚಾವಡಿಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಸ್ಥಳೀಯ ರಾಜಕಾರಣ, ಅಧಿಕಾರಿಗಳ ಭ್ರಷ್ಟತೆ ಫಲವಾಗಿ ಉಳ್ಳವರಿಗೇ ವಿವಿಧ ವಸತಿ ಯೋಜನೆಗಳ ಮನೆಗಳು ದೊರೆಯುತ್ತಿವೆ. ವಸತಿರಹಿತರಿಗೆ ಮನೆಗಳು ಮಂಜೂರಾಗುತ್ತಿಲ್ಲ. ಬಹುತೇಕ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿ ವರ್ಷ್ಷ ಒಂದೇ ಕುಟುಂಬಕ್ಕೆ ವಿವಿಧ ವಸತಿ ಯೋಜನೆಯಡಿ ಮನೆಗಳು ನಿರಂತರವಾಗಿ ಹಲವಾರು ಮಂಜೂರಾಗಿರುತ್ತವೆ, ಆದರೆ ಮನೆ ನಿರ್ಮಾಣ ಮಾತ್ರ ಆಗಿರುವುದಿಲ್ಲ ಎಂದು ದೂರಿದರು. ಯಾವುದೇ ರೂಪುರೇಷೆಯಿಲ್ಲದೇ ನಿರ್ಮಿಸಿದ ಮನೆಗಳಿಂದ ನಗರ, ಪಟ್ಟಣಕ್ಕೆ ಸೌಂಧರ್ಯ ಧಕ್ಕೆ ಆಗುವುದು, ಕೊಳೆಗೇರಿ ಸೃಷ್ಟಿಯಾಗುತ್ತದೆ. ರಸ್ತೆ, ಕುಡಿಯುವ ನೀರಿನ ಸಂಪರ್ಕ, ವಿದ್ಯುತ್ ಸಪರ್ಕ ಮೊದಲಾದ ಅಗತ್ಯ ಸೇವೆಗಳ ಕೊರತೆಯೂ ಕಾಡಿರುತ್ತದೆ ಎಂದು ಇಲ್ಲಿನ ಪ್ರಾಂಶುಪಾಲ ವಿನೋದ್ ಕೆ. ಮ್ಯಾಥ್ಯೂ ಹೇಳಿದರು. ಟೀನಾ ವಿನೋದ್ ಇದ್ದರು.
ಕಾಲೇಜಿನ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ
ಶಿಡ್ಲಘಟ್ಟ: ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಶಾಸಕ ಎಂ. ರಾಜಣ್ಣ ನೆರವೇರಿಸಿದರು. ಕರ್ನಾಟಕ ಹೌಸಿಂಗ್ ಬೋರ್ಡ್ನಿಂದ ರು. 60 ಲಕ್ಷ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಕೆಸಲದ ಗುತ್ತಿಗೆಯನ್ನು ಹರಿಕೃಷ್ಣರಿಗೆ ವಹಿಸಲಾಗಿದೆ. ಈ ಸಂದರ್ಭದಲ್ಲಿ ಶಾಸಕ ರಾಜಣ್ಣ ಮಾತನಾಡಿ, ಕಾಲೇಜಿನ ಅಬಿವೃದ್ಧಿಗೆ ಸಹಕಾರ ನೀಡುವುದಾಗಿ ಕಟ್ಟಡವನ್ನು ಬೇಗ ಪೂರ್ಣಗೊಳಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಧನುಂಜಯರೆಡ್ಡಿ, ಅಪ್ಸರ್ ಪಾಷಾ, ಪ್ರಾಂಶುಪಾಲ ಎಂ. ನಾರಾಯಣಸ್ವಾಮಿ, ಗುತ್ತಿಗೆದಾರ ಹರಿಕೃಷ್ಣ, ಎಂಜಿನಿಯರ್ ಶಂಕರ್ ಇದ್ದರು.
ವಿಕಲಚೇತನ ಮಕ್ಕಳ ದಸರಾ ಶೈಕ್ಷಣಿಕ ಶಿಬಿರ
ಗೌರಿಬಿದನೂರು: ವಿಕಲಚೇತನ ಮಕ್ಕಳಿಗೆ ಆಯೋಜಿಸಿದ್ದ ದಸರಾ ಶೈಕ್ಷಣಿಕ ಶಿಬಿರವನ್ನು ಮಂಚೇನಹಳ್ಳಿ ಸರ್ಕಾರಿ ಪ್ರೌಡಶಾಲೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಶ್ರೀರಂಗಪ್ಪ ವಹಿಸಿ ಮಾತನಾಡಿ, ಶಿಬಿರಗಳನ್ನು ಹೆಚ್ಚು ಮಾಡಿದರೆ ಮಕ್ಕಳಿಗೆ ಕಲಿಯಲು ಆಸಕ್ತಿ ಬರತ್ತದೆ ಎಂದರು. ರಿಯಾಜ್ ಮಾತನಾಡಿದರು. ಮುನಿನಾರಾಯಣ ಪ್ರಾಸ್ಥಾವಿಕ ಭಾಷಣ ಮಾಡಿದರು. ಮಂಜುನಾಥ್, ಮೂರ್ತಿ, ಸುಬ್ರಮಣಿ, ಪೋಷಕರು ಭಾಗವಹಿಸಿದ್ದರು.