ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಂಪಾದನೆಯಲ್ಲಿ ಸ್ವಲ್ಪ ಭಾಗ ದಾನ ಮಾಡಿ

Rashmi Kasaragodu
Updated On : 10 Oct 2013, 12:40 pm

ಗೌರಿಬಿದನೂರು: ಮಾನವನು ತನ್ನ ಸಂಪಾದನೆಯಲ್ಲಿ ಸ್ವಲ್ಪ ಭಾಗ ಸಮಾಜದ ಜನರ ಅಭಿವೃದ್ಧಿಗಾಗಿ ಮೀಸಲಿಡಬೇಕು ಎಂದು ಬಾಳೇಹೊನ್ನೂರಿನ ಮಠಾಧೀಶರಾದ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿ ತಿಳಿಸಿದರು.
ನಾಮಗೊಂಡ್ಲು ಗ್ರಾಮದಲ್ಲಿ ನಡೆದ ಎರಡು ಸಮುದಾಯ ಭವನಗಳ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ದೇವರಮೇಲೆ ನಂಬಿಕೆ ಇರಬೇಕು, ಗುರುಹಿರಿಯರಿಗೆ ಗೌರವನೀಡಬೇಕೆಂದು ತಿಳಿಸಿದರು. ರು. 20ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಎರಡು ಸಮುದಾಯ ಭವನಗಳ ಉದ್ಘಾಟನೆ, ರು. 4.30 ಲಕ್ಷ ಖರ್ಚಿನೊಂದಿಗೆ ನಿರ್ಮಾಣವಾಗಲಿರುವ ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡ ಪ್ರಕಾಶರೆಡ್ಡಿ, ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಗ್ರಾಪಂಅಧ್ಯಕ್ಷರುಕ್ಮಿಣಮ್ಮ, ಟಿಪಿಎಸ್ ಸದಸ್ಯ ಪದ್ಮಪ್ರಕಾಶ್, ಅಶ್ವತ್ಥರೆಡ್ಡಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement