ಎಟಿಎಂ ದೋಚುವ ವಿಫಲ ಯತ್ನ
ಮಾಲೂರು: ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಕೆನರಾ ಬ್ಯಾಂಕಿನ ಎಟಿಎಂ ದೋಚುವ ವಿಫಲ ಯತ್ನ ನಡೆದಿರುವ ಬಗ್ಗೆ ವರದಿಯಾಗಿದೆ.
ಗ್ರಾಮದ ಹೃದಯ ಭಾಗದಲ್ಲಿರುವ ಕೆನರಾಬ್ಯಾಂಕ್ ಎಟಿಎಮ್ಗೆ ಮಧ್ಯರಾತ್ರಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಒಡೆಯುವ ಪ್ರಯತ್ನ ಮಾಡಿದ್ದಾರೆ. ವೈರ್ಗಳನ್ನು ಬೇರ್ಪಡಿಸಿದ್ದು ವಿಫಲರಾಗಿದ್ದಾರೆ. ದುಷ್ಕರ್ಮಿಗಳ ಕೃತ್ಯ ಎಟಿಎಂ ಒಳಗೆ ಆಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದು, ಈ ಸಂಬಂಧ ಲಕ್ಕೂರು ಹೂರ ಠಾಣೆಯಲ್ಲಿ ಕೆನರಾ ಬ್ಯಾಂಕಿನ ವ್ಯವಸ್ಥಪಾಕ ವೆಂಕಟೇಶ್ ದೂರು ನೀಡಿದ್ದಾರೆ.