ಕೃಷಿ ಜೊತೆ ಬೇರೆ ಉಪ ಕಸುಬು ಮಾಡಿ: ಶಾಸಕ
ಮುಳಬಾಗಲು: ಹೆಚ್ಚಿನ ಸಂಖ್ಯೆಯ ಒಕ್ಕಲಿಗರು ಕೃಷಿ ಮೇಲೆ ಅವಲಂಬಿತರಾಗಿದ್ದು, ಕೃಷಿ ಇಂದು ಲಾಭದಾಯಕ ಉದ್ಯಮವಾಗದ ಕಾರಣ ಬೇರೆ ಕಸುಬು ಮಾಡುವಂತೆ ಮಾಲೂರು ಶಾಸಕ ಮಂಜುನಾಥಗೌಡ ಕರೆ ನೀಡಿದರು.
ಪಟ್ಟಣದ ಶಿವಕೇಶವನಗರದ ಒಕ್ಕಲಿಗರ ಭವನದಲ್ಲಿ ಭಾನುವಾರ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ಒಕ್ಕಲಿಗ ಜನಾಂಗದ ಎಸ್ಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಿಂತಾಮಣಿ ಶಾಸಕ ಕೃಷ್ಣರೆಡ್ಡಿ ಮಾತನಾಡಿ, ಜನಾಂಗದ ರಾಜಕೀಯ ಮುಖಂಡರು ರಾಜಕೀಯವನ್ನು ಬದಿಗಿಟ್ಟು ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು ಎಂದರು. ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ. ಶಂಕರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಕ್ಕಲಿಗ ನೌಕರರಿಗೆ ತೊಂದರೆಯಾಗುತ್ತಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲವೆಂದರು.
ಕಾರ್ಯಕ್ರಮವನ್ನು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀರಾಮ್ ಉದ್ಫಾಟಿಸಿದರು.