ದಲಿತ ಸಂಘಟನೆಗಳ ನಿರ್ಲಕ್ಷ್ಯಕ್ಕೆ ಖಂಡನೆ
ಮಾಲೂರು: ನಾಡ ಹಬ್ಬ ಸೇರಿದಂತೆ ಎಲ್ಲ ಪ್ರಮುಖ ಸಭೆಗಳಿಗೆ ದಲಿತ ಸಂಘಟನೆಗಳನ್ನು ತಾಲೂಕು ಆಡಳಿತ ನಿರ್ಲಕ್ಷಿಸುತ್ತಿರುವುದು ಖಂಡನೀಯ ಎಂದು ದಲಿತ ಸಂಘಟನೆಗಳ ಐಕ್ಯತಾ ವೇದಿಕೆ ಗೋವಿಂದಸ್ವಾಮಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಿಯೇ ಪಡೆಯಬೇಕಾದ ಸ್ಥಿತಿಯಲ್ಲಿರುವ ದಲಿತ ಸಂಘಟನೆಗಳನ್ನು ವಾಲ್ಮೀಕಿ ಜಯಂತಿ, ಕನ್ನಡ ರಾಜ್ಯೋತ್ಸವದಂತಹ ಕಾರ್ಯಕ್ರಮಗಳ ಪೂರ್ವಭಾವಿ ಸಭೆಗಳಿಗೆ ಕಡೆಗಣಿಸುತ್ತಿದೆ. ದಲಿತ ಸಂಘಟನೆಗಳ ಬಗ್ಗೆ ತಾಲೂಕು ಆಡಳಿತದ ನಡುವಳಿಕೆಯನ್ನು ಮುಂದುವರೆಸಿದರೆ ದಲಿತ ಸಂಘಟನೆಗಳಿಂದ ಕಾನೂನು ಭಂಗ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪುರಸನಹಳ್ಳಿ ಶ್ರೀನಿವಾಸ್ ಮಾತನಾಡಿದರು. ಕೋಡೂರು ಗೋಪಾಲ್, ಕೋಡೂರು ರವಿ ಕುಮಾರ್, ಎಚ್. ನಾರಾಯಣಪ್ಪ, ಮುನಿಕೃಷ್ಣಪ್ಪ ಇದ್ದರು.