ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಬಂಗಾರಪೇಟೆ ತಾಪಂ ಇಒರನ್ನು ಮಾತೃ ಇಲಾಖೆಗೆ ಕಳುಹಿಸಿ'

Rashmi Kasaragodu
Updated On : 11 Oct 2013, 12:20 pm

ಬಂಗಾರಪೇಟೆ: ಇಲ್ಲಿನ ತಾಲೂಕು ಪಂಚಾಯ್ತಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಡಾ. ಜಗದೀಶ್ ಅವರನ್ನು ಕೂಡಲೆ ಮಾತೃ ಇಲಾಖೆಗೆ ವಾಪಸ್ ಕಳುಹಿಸಬೇಕೆಂದು ಆಗ್ರಹಿಸಿ ತಾಪಂ ಅಧ್ಯಕ್ಷರು ಸೇರಿದಂತೆ ಹಲವು ಸದಸ್ಯರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು.
ಹಲವು ಅವ್ಯವಹಾರದ ಹಿನ್ನೆಲೆಯಲ್ಲಿ ಈ ಹಿಂದಿನ ಇಒ ಶ್ರೀನಿವಾಸ್ ಅವರನ್ನು ಎತ್ತಂಗಡಿ ಮಾಡಿದ ಬಳಿಕ ಪಶುಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ. ಜಗದೀಶ್ ಅವರನ್ನು ಪ್ರಭಾರ ಇಒ ಆಗಿ ನೇಮಿಸಲಾಗಿದೆ. ಆದರೆ ಇವರು ಎರಡೂ ಕಡೆ ಸಮರ್ಪಕವಾಗಿ ಕೆಲಸ ಮಾಡಲಾಗುತ್ತಿಲ್ಲ. ತಾಪಂ ಕಚೇರಿಗೆ ಬರುವುದನ್ನೇ ನಿಲ್ಲಿಸಿದ್ದಾರೆ ಇದರಿಂದ ತಾಪಂನಲ್ಲಿ ಬಹುತೇಕ ಕೆಲಸ ಕಾರ್ಯಗಳು ಮೂರು ತಿಂಗಳಿಂದ ನೆನೆಗುದಿಗೆ ಬಿದ್ದಿದೆ ದೂರವಾಣಿಗೂ ಸಿಗುವುದಿಲ್ಲ. ತಾಪಂ ಸಭೆ ಕರೆಯುವಂತೆ ಸೂಚಿಸಿದರೂ ಇದುವರೆಗೂ ಕರೆದಿಲ್ಲ ಇವರ ನಡುವಳಿಕೆಯಿಂದ ಸದಸ್ಯರಿಗೆ ಅನಾನುಕೂಲವಾಗಿದ್ದು ಅಲ್ಲದೆ ಎರಡು ತಿಂಗಳಿಂದ ಕ್ಷೇತ್ರದಲ್ಲಿ ಹಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡು ಹತ್ತಾರು ಹಸುಗಳು ಸಾಯುತ್ತಿದ್ದರೂ ಆ ಕಡೆ ಸಹ ಜಗದೀಶ್ ನಿಗಾವಹಿಸುತ್ತಿಲ್ಲ, ಜಾನುವಾರುಗಳಿಗೆ ಕಾಲುಬಾಯಿ ಜ್ವರ ಇರುವುದರಿಂದ ಪಶುಸಂಗೋಪನ ಇಲಾಖೆ ಅಧೀನ ಕಾರ್ಯದರ್ಶಿ ತಿಂಗಳ ಹಿಂದೆಯೇ ಜಗದೀಶ್ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸುವಂತೆ ಪತ್ರ ಬರೆದಿದ್ದರು ಅವರ ಪತ್ರಕ್ಕೂ ಕಿಮ್ಮತ್ತಿಲ್ಲದಂತಾಗಿದೆ.
ಜಗದೀಶ್ ಅವರ ನಿರ್ಲಕ್ಷ್ಯ ಧೋರಣೆಯಿಂದ ಎರಡೂ ಕಡೆ ನ್ಯಾಯ ದೊರಕಿಸಿಕೊಡಲು ಅವರಿಂದ ಅಸಾಧ್ಯವಾಗಿರುವುದರಿಂದ ಕೂಡಲೆ ಜಗದೀಶ್ ಅವರನ್ನು ಅವರ ಮಾತೃ ಇಲಾಖೆಗೆ ವಾಪಸ್ ಕಳುಹಿಸಿ ತಾಪಂಗೆ ಹೊಸಬರನ್ನು ನೇಮಿಸುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದ್ದರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈ ಕೂಡಲೆ ಅವರನ್ನು ವಾಪಸ್ ಕಳುಹಿಸಿ ಹೊಸ ಇಒರನ್ನು ನೇಮಿಸುವಂತೆ ಆಗ್ರಹಿಸಿ ತಾಪಂ ಅಧ್ಯಕ್ಷ ರೇಣುಕಾ ಬಾಲಚಂದ್ರ, ಉಪಾಧ್ಯಕ್ಷ ಸಂಪಂಗಿ ರೆಡ್ಡಿ ನೇತೃತ್ವದಲ್ಲಿ ಸದಸ್ಯರು ಇಒ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು.
ಪ್ರತಿಭಟನೆಗೆ ಸ್ಪಂದಿಸಿದ ಜಿಂಪ ಸಿಎಸ್ ಇಒ ಆಗಿ ಎಂ. ಮಹದೇವಪ್ಪರನ್ನು ನೇಮಕ ಮಾಡಿ ಆದೇಶ ಹೊರಡಿಸಿದ ನಂತರ ಹಿಂಪಡೆದರು ಪ್ರತಿಭಟನೆಯಲ್ಲಿ ಮಾಜಿ ಉಪಾಧ್ಯಕ್ಷ ಅಮರೇಶ್, ಅಂಬೂಬಾಯಿ, ಶಿವಣ್ಣ, ಬಿಜೆಪಿ ಅಧ್ಯಕ್ಷ ಮಾಕಂರ್ಡೇಗೌಡ, ಮುಖಂಡ ಸುಗೇಂದ್ರನ್, ವಿಕ್ಕಿ ಮತ್ತಿತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement