ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಾಲಕಿ ಕಾಣೆ; ಅಪಹರಣ ಪ್ರಕರಣ ದಾಖಲು

Rashmi Kasaragodu
Updated On : 11 Oct 2013, 12:19 pm

ಕೆಜಿಎಫ್: ಕಾಲೇಜಿಗೆ ಹೋದ ಬಾಲಕಿ ಕಾಣೆಯಾಗಿದ್ದು ಬಾಲಕಿಯನ್ನು ಅಪಹರಿಸಿರುವುದಾಗಿ ಬಾಲಕಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ವರದಿಯಾಗಿದೆ.
ಬೇತಮಂಗಲ ಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯ ಗನ್ನೇರನಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮೀನಾರಾಯಣ ಎಂಬುವರ ಮಗಳಾದ ಸುಹಾಸಿನಿ(16) ಕಾಣೆಯಾದ ಬಾಲಕಿ. ಈಕೆ ಸುಂದರಪಾಳ್ಯ ಗ್ರಾಮದ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು ಎಂದಿನಂತೆ ಕಾಲೇಜಿಗೆ ಹೋಗಲು ಬೆಳಗ್ಗೆ ಮನೆಯಿಂದ ಹೋದವಳು ರಾತ್ರಿಯಾದರೂ ಮನೆಗೆ ಬಂದಿಲ್ಲ. ಗಾಭರಿಗೊಂಡ ಬಾಲಕಿಯ ತಂದೆ ಲಕ್ಷ್ಮೀನಾರಾಯಣ ಈ ಬಗ್ಗೆ ಕುಲಂಕುಶವಾಗಿ ವಿಚಾರಿಸಿದಾಗ ಅದೇ ಗ್ರಾಮದ ನಿವಾಸಿಗಳಾದ ತ್ಯಾಗರಾಜ್, ರಾಮಕೃಷ್ಣ, ಪದ್ಮಮ್ಮ ಹಾಗೂ ಪೃಥ್ವಿ ಎಂಬವರು ಸುಂದರಪಾಳ್ಯ ಹಾಗೂ ಕೊತ್ತಾಪಲ್ಲಿ ಗ್ರಾಮದ ಬಳಿ ಸುಹಾಸಿನಿಳನ್ನು ಬಲವಂತವಾಗಿ ಕಾರಿನಲ್ಲಿ ಅಪಹರಿಸಿರುವುದಾಗಿ ಬಾಲಕಿಯ ತಂದೆ ಲಕ್ಷ್ಮೀನಾರಾಯಣ ಬೇತಮಂಗಲ ಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಾಲಕ ಸಾವು
ಶ್ರೀನಿವಾಸಪುರ: ಜೆಸಿಬಿ ಯಂತ್ರವನ್ನು ಚಾಲಕ ತೊಳೆಯಲು ಹೋಗಿದ್ದಾಗ ಜೆಸಿಬಿ ಕೆರೆಗೆ ಉರುಳಿಬಿದ್ದು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಶಿವಪುರದಲ್ಲಿ ಸಂಭವಿಸಿದೆ. ಮೃತಪ್ಪಟ್ಟ ಚಾಲಕನನ್ನುಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಿರೀಶ (30) ಎಂದು ಗುರುತಿಸಲಾಗಿದೆ. ಈ ಬಗ್ಗೆ ಪಟ್ಟಣದ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement