ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಭಾವಿ ಶುದ್ಧಗೊಳಿಸಿದ ಆಡಳಿತ

Rashmi Kasaragodu
Updated On : 11 Oct 2013, 12:22 pm

ಚಿಂತಾಮಣಿ: ಮುರುಗಮಲ್ಲ ಗ್ರಾಮದಲ್ಲಿ ಕೆರೆ ಬಾವಿಯಲ್ಲಿ ಕ್ಷುದ್ರಪೂಜೆ ಮಾಡಿ ಕುಡಿಯುವ ನೀರಿನಲ್ಲಿ ವಾಮಾಚಾರ ಮಾಡಿರುವ ಬಗ್ಗೆ ತಾಲೂಕು ದಂಡಾಧಿಕಾರಿಗಳು ಅಗ್ನಿಶಾಮಕ ದಳ ಹಾಗೂ ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರನ್ನು ಶುದ್ಧೀಕರಿಸಿದರು.
ಕನ್ನಡಪ್ರಭ ವರದಿ ಮಾಡಿದ ಪರಿಣಾಮ ಈ ಕ್ರಮ ಕೈಗೊಂಡಿದ್ದು, ತಾಲ್ಲೂಕಿನ ಮುರುಗಮಲ್ಲ ಗ್ರಾಮದಲ್ಲಿ ಕುಂಟಪಾಳ್ಯ ಕೆರೆ ಹಾಗೂ ಬಾವಿಯಲ್ಲಿ ಕ್ಷುದ್ರಪೂಜೆ ಮಾಡಿ ಕುಡಿಯುವ ನೀರಿನಲ್ಲಿ ವಾಮಾಚಾರ ಮಾಡಿರುವ ಬಗ್ಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಮಂಗಳವಾರ ಸುದ್ದಿ ಪ್ರಕಟಗೊಂಡಿತ್ತು. ಇದಕ್ಕೆ ತಾಲೂಕು ದಂಡಾಧಿಕಾರಿ ಎಂ.ಎನ್. ಮಂಜುನಾಥ್ ವರದಿಗೆ ಸ್ಪಂದಿಸಿ ನೀರನ್ನು ಶುದ್ಧೀಕರಿಸಲು ಸಂಬಂಧಪಟ್ಟ ಗ್ರಾಪಂ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಸೂಚಿಸಿದ ಪರಿಣಾಮ ಗ್ರಾಮದಲ್ಲಿರುವ ಕೆರೆ ಹಾಗೂ ಬಾವಿಯನ್ನು ಶುದ್ಧೀಕರಿಸಲಾಯಿತು.
ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಸ್ಪಂದಿಸುತ್ತಿರುವ ಕನ್ನಡಪ್ರಭ ವರದಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement