ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾನಸಿಕ ಅಸ್ವಸ್ಥರನ್ನು ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಕೊಡಿಸಿ

Rashmi Kasaragodu
Updated On : 11 Oct 2013, 12:20 pm

ಚಿಕ್ಕಬಳ್ಳಾಪುರ: ಮಾನಸಿಕ ಅಸ್ವಸ್ಥರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡುವುದು ಸರಿಯಲ್ಲ. ಸೂಕ್ತ ಚಿಕಿತ್ಸೆಯನ್ನು ಕೊಡಿಸಿ ಅವರನ್ನು ಕಾಪಾಡುವ ಕೆಲಸವನ್ನು ಮಾಡಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ. ಈರಣ್ಣವರ್ ಸಲಹೆ ನೀಡಿದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ತಾಲೂಕಿನ ಕಂದವಾರ ಗ್ರಾಮದಲ್ಲಿನ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಆಯೋಜಿಸಿದ್ದ ಮಾನಸಿಕ ಆರೋಗ್ಯದ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬಸ್, ರೈಲು ನಿಲ್ದಾಣ, ಪ್ರಮುಖ ರಸ್ತೆಗಳು ಸೇರಿದಂತೆ ಅನೇಕ ಕಡೆ ಅನಾಥರಾಗಿ ಅನೇಕ ಮಾನಸಿಕ ಅಸ್ವಸ್ಥರು ಯಾವುದೇ ಪರಿವೇ ಇಲ್ಲದೇ ಅಲೆದಾಡುತ್ತಿರುತ್ತಾರೆ.ಇಂತಹವರನ್ನು ಗುರುತಿಸಿ ಅಗತ್ಯವಿರುವ ಚಿಕಿತ್ಸೆಯನ್ನು ಕೊಡಿಸುವ ಕೆಲಸವನ್ನು ಸ್ವಯಂ ಸೇವಾ ಸಂಸ್ಥೆಗಳು ಕೈಗೊಳ್ಳಬೇಕು. ಅಲ್ಲದೇ ಜನರು ಸಹ ಸಹಕಾರ ನೀಡಿ ಮಾನಸಿಕ ಅಸ್ವಸ್ಥರ ನೆರವಿಗೆ ಧಾವಿಸಬೇಕು. ಈ ಮೂಲಕ ಸಮಾಜದ ಮುಖ್ಯವಾಹಿನಿನಲ್ಲಿ ಉತ್ತಮ ಜೀವನ ನಡೆಸುವಂತ ರೀತಿಯಲ್ಲಿ ಅಸ್ವಸ್ಥರನ್ನು ಸರಿಪಡಿಸಬೇಕೆಂದು ಸಲಹೆ ನೀಡಿದರು.
ಕಾನೂನಿನ ಅರಿವನ್ನು ಪ್ರತಿಯೊಬ್ಬರು ಹೊಂದಿರಬೇಕು. ಆಗ ಅಗತ್ಯವಿರುವ ನೆರವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಾನೂನಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರಚಾರವನ್ನು ಕೈಗೊಳ್ಳಬೇಕಾಗಿದೆ ಎಂದರು.  ನ್ಯಾಯಾಧೀಶ ಅಮರನಾರಾಯಣ ಮಾತನಾಡಿ, ದೈಹಿಕವಾಗಿ ಎಷ್ಟೇ ಬಲಾಢ್ಯರಾಗಿದ್ದರೂ ಒಳ್ಳೆಯ ಮಾನಸಿಕ ಆರೋಗ್ಯವನ್ನು ಹೊಂದಿರುವುದು ಮುಖ್ಯ.ಆಗ ಮತ್ರ ಉತ್ತಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.ಈ ಹಿನ್ನೆಲೆಯಲ್ಲಿ ಮಾನಸಿಕವಾಗಿ ಸದಣಢತೆಯನ್ನು ಹೊಂದಿರಬೇಕು ಎಂದರು.
ಮನೋರೋಗ ತಜ್ಞ ಕಿಶೋರ್ಕುಮಾರ್ ಮಾತನಾಡಿ, ಈಗ ಮಾನಸಿಕ ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣಪಡಿಸುವ ಚಿಕಿತ್ಸೆಗಳು ಲಭ್ಯವಿರುವುದರಿಂದ ಈ ಬಗ್ಗೆ ಯಾವುದೇ ಆತಂಕಪಡುವ ಅವಶ್ಯಕತೆಯಿಲ್ಲ.ಪ್ರಾರಂಭದಲ್ಲಿಯೇ ಕಾಯಿಲೆಯನ್ನು ಮೊದಲು ಗುರುತಿಸಿ,ಆನಂತರ ಚಿಕಿತ್ಸೆ ಕೊಡಿಸುವ, ಜತೆಗೆ ಧೈರ್ಯ ತುಂಬುವ ಕೆಲಸವಾಗಬೇಕೆಂದ ಅವರು, ಮನಸ್ಸಿನಲ್ಲಿ ಸಂದೇಹ, ಗೊಂದಲ, ಒತ್ತಡಗಳನ್ನಿಟ್ಟುಕೊಂಡು ಕೊರಗುವುದರಿಂದ ಮಾನಸಿಕ ರೋಗ ಬರುತ್ತದೆ. ಏನೇ ಆದರೂ ನಿರ್ಭಯ, ಸಮಾಧಾನ ಚಿತ್ತದಿಂದ ಇದ್ದಾಗ ಮಾನಸಿಕ ಕಾಯಿಲೆ ದೂರವಾಗುತ್ತದೆ ಎಂದರು.
ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ನಳಿನಿ, ಅನಿತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಂಗಸ್ವಾಮಿ, ಲೋಕಾಯುಕ್ತ ಅಭಿಯೋಜಕ ರಘುರಾಂ, ವಕೀಲರ ಸಂಘದ ಕಾರ್ಯದರ್ಶಿ ಪಾಪಿರೆಡ್ಡಿ, ಆರ್ ಎಚ್ ಓ ಸುರೇಂದ್ರನಾಥ್ ಮುಂತಾದವರು ಉಪಸ್ಥಿತರಿದ್ದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement