ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಚಿಂತಾಮಣಿ: ರಕ್ತದಾನ ಮಾಡುವುದರಿಂದ ಮತ್ತೊಂದು ಜೀವಕ್ಕೆ ಪ್ರಾಣದಾನ ನೀಡುವಂತಾಗುತ್ತದೆ ಎಂದು ಪ್ರೊ.ಜಿ. ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗುರುವಾರ ಯುವ ರೆಡ್ ಕ್ರಾಸ್ ಘಟಕ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಚಿಕ್ಕಬಳ್ಳಾಪುರ ಶಾಖೆ ಸಹಯೋಗದಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಸ್ಥಳೀಯರು ರಕ್ತದಾನ ಮಾಡಿ ಮತ್ತೊಂದು ಜೀವಕ್ಕೆ ಪ್ರಾಣದಾನ ಮಾಡಲು ಮುಂದಾಗಬೇಕೆಂದು ಹೇಳಿದರು.
ಜಿಲ್ಲಾ ರಕ್ತನಿಧಿಯ ವೈದ್ಯಾಧಿಕಾರಿ ಡಾ. ಹೇಮಂತ್, ದೇಹದ ಅಧಿಕ ಕೊಬ್ಬು ಕಡಿಮೆ ಮಾಡಲು ರಕ್ತದಾನ ಮಾಡಿ ಆರೋಗ್ಯವಂತರಾಗಲು ಹೇಳಿದರು. ಇನ್ನೂರಕ್ಕೂ ಹೆಚ್ಚು ಅಧಿಕ ವಿದ್ಯಾರ್ಥಿನಿಯರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ರಕ್ತದಾನ ಮಾಡಿದರು. ನಾರಾಯಣರೆಡ್ಡಿ, ನಾಗೇಶ್,ದಯಾನಂದ್ ಬಾಬು, ರಾಮಪ್ರಸಾದ್ ರಾವ್, ನಾಗೇಶ್, ಕೆಂಪರಾಜು, ಎಂ.ಎನ್. ರಘು ಭಾಗವಹಿಸಿದ್ದರು.