ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ಪ್ರಕಟಣೆಗೆ ಕ್ರಮ
ಕೋಲಾರ: ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ 2014ನೇ ಸಾಲಿನಲ್ಲಿ ನಡೆಯಲಿರುವ ಚುನಾವಣೆಗೆ ಸಂಬಂಧಪಟ್ಟಂತೆ ಕೋಲಾರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ತಯಾರಿಕೆಗೆ ಸಂಬಂಧಪಟ್ಟಂತೆ ವಿವರವಾದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳು ರೂಪಿಸಿದ್ದಾರೆ.
ಈಗಾಗಲೆ ಅ.1 ರಂದು ಕರಡು ಮತದಾರರ ಪಟ್ಟಿ ಪ್ರಕಟಣೆಗಾಗಿ ಆಧಿಸೂಟನೆ ಹೊರಡಿಸಲಾಗಿರುವುದಲ್ಲದೆ ಹಕ್ಕು ಅರ್ಜಿಗಳನ್ನು ಪ್ರಪತ್ರ 18 ರಲ್ಲಿ ಸಲ್ಲಿಸುವುದನ್ನು ಪ್ರಾರಂಭಿಸಲಾಗಿದೆ.
ಅ.15ರ ಮಂಗಳವಾರದಂದು ಹಾಗೂ ಅ.25ಶುಕ್ರವಾರ ಪತ್ರಿಕೆಗಳಲ್ಲಿ ಮೊದಲನೆ ನೋಟಿಸನ್ನು ಮರು ಪ್ರಚಾರ ಪಡಿಸಲಾಗುತ್ತದೆ. ಮತದಾರರ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಅ.30 ರ ತನಕ ಸಲ್ಲಿಸಬಹುದಾಗಿದೆಯಲ್ಲದೆ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಡಿಸೆಂಬರ್ 3 ರಂದು ಇತ್ಯರ್ಥ ಪಡಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. 2004 ನೇ ಜನವರಿ 7 ರಂದು ತಿದ್ದುಪಡಿಗಳೊಂದಿಗೆ ಮತದಾರರ ಪಟ್ಟಿಯನ್ನು ಮುದ್ರಿಸಲಾಗುವುದು. ಅಂತಿಮವಾಗಿ ಮತದಾರರ ಪಟ್ಟಿಯನ್ನು 2004 ಜನವರಿ 10 ರಂದು ಪ್ರಕಟಿಸಲಾಗುತ್ತದೆ.
ಹಿಂದಿನ ಚುನಾವಣೆಯಲ್ಲಿ ಬಳಸಲಾಗಿದ್ದ ಪ್ರಸ್ತುತ ಮತದಾರರ ಪಟ್ಟಿ ಮೂಲ ಮತದಾರರ ಪಟ್ಟಿ ಹಾಗೂ ತಿದ್ದುಪಡಿಗಳನ್ನು ಒಟ್ಟುಗೂಡಿಸಿ ಈಗಾಗಲೆ ಕರಡು ಮತದಾರರ ಪಟ್ಟಿಯನ್ನು ಎಲ್ಲಾ ತಾಲೂಕು ಕಚೇರಿಗಳಲ್ಲಿ ಸಹಾಯಕ ಕಮೀಷನರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಮತದಾರರ ನೋಂದಣಾಧಿಕಾರಿಗಳಾಗಿ ಸಹಾಯಕ ಕಮೀಷನರ್, ಕೋಲಾರ ಎಲ್ಲಾ ತಹಸೀಲ್ದಾರರು, ರಾಬರ್ಟ್ಸನ್ ಪೇಟೆ ನಗರಸಭಾ ಆಯುಕ್ತರನ್ನು ನೇಮಕ ಮಾಡಲಾಗಿದೆಯಲ್ಲದೆ ತಾಲೂಕು ಚುನಾವಣಾ ಶಿರಸ್ತೇದಾರರನ್ನು ನಿರ್ಧಿಷ್ಠಾಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಮತದಾರರು ಈಗಾಗಲೆ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಹೆಸರುಗಳು ಇವೆಯೇ ಎಂದು ಪರಿಶೀಲಿಸಿಕೊಳ್ಳಬಹುದು. ಹೆಚ್ಚುವರಿ ಮಾಹಿತಿಯ ನಮೂನೆಯಲ್ಲಿ ತಮ್ಮ ಭಾವಚಿತ್ರದೊಂದಿಗೆ ಆಯಾ ಕ:ಕೇರಿಗೆ ಅಥವ ಬಿ.ಎಲ್.ಓ ಮುಖಾಂತರ ಸಲ್ಲಿಸಬೇಕಾಗುತ್ತದೆ. ಹೆಸರು ಸೇರ್ಪಡೆಯಾಗಿಲ್ಲದ ಪಕ್ಷದಲ್ಲಿ ಪ್ರಪತ್ರ 18 ರಲ್ಲಿ ಅಗತ್ಯ ದಾಖಲೆಗಳೊಡನೆ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳುವುದು.
2013 ನವೆಂಬರ್ 1 ಕ್ಕೆ ಮೊದಲು ಯಾವುದಾದರು ವಿಶ್ವವಿದ್ಯಾನಿಲಯದಲ್ಲಿ ಪದವೀಧರರಾಗಿರುವವರು ಪದವೀಧರ ಕ್ಷೇತ್ರದ ಮತದಾರರಾಗಿ ನೊಂದಾಯಿಸಿಕೊಳ್ಳಲು ಅರ್ಹರಿರುತ್ತಾರೆ. ಅರ್ಹ ಪದವೀಧರರು ಪ್ರಪತ್ರ 18 ರಲ್ಲಿ ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲೂಕು ಕಚೇರಿಗಳಲ್ಲಿ ಮತ್ತು ರಾಬರ್ಟ್ ಸನ್ ಪೇಟೆ ನಗರಸಭೆ ಕಾರ್ಯಾಲಯದಲ್ಲಿ ನಿರ್ಧಿಷ್ಟ ಪಡಿಸಿದ ಅಧಿಕಾರಿಗಳಿಗೆ ಅ.30 ರೊಳಗೆ ಸಲ್ಲಿಸಬಹುದಾಗಿರುತ್ತೆ.
ದೂರು ದೋಷ ರಹಿತವಾಗಿ ಮತದಾರರ ಪಟ್ಟಿಯನ್ನು ತಯಾರಿಸಲು ಎಲ್ಲಾ ಅಧಿಕಾರಿಗಳು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಪದವೀಧರರು, ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ಅಗತ್ಯ ಸಹಕಾರವನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.